ಗಮನಿಸಿ : ಬೆಂಗಳೂರಿನಲ್ಲಿ ‘ಕಂಬಳ’ ವೀಕ್ಷಿಸಲು ಟಿಕೆಟ್ ಇಲ್ಲ, ಸಾರ್ವಜನಿಕರಿಗೆ ಉಚಿತ ಪ್ರವೇಶ |Bengaluru Kambala

ಬೆಂಗಳೂರು : ಬೆಂಗಳೂರು ಅರಮನೆ ಮೈದಾನದಲ್ಲಿ ಇಂದಿನಿಂದ ನ.26 ರವರೆಗೆ ಮೂರು ದಿನಗಳ ಕಾಲ ಜನಪ್ರಿಯ ಕಂಬಳ ಪಂದ್ಯ ನಡೆಯಲಿದ್ದು, ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ.

ಕಂಬಳ ನೋಡಲು ಟಿಕೆಟ್ ಇದೆಯಾ..? ಎಷ್ಟು ಹಣ ಕೊಡಬೇಕು..ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಆದರೆ ಕಂಬಳ ವೀಕ್ಷಿಸಲು ಯಾವುದೇ ಟಿಕೆಟ್ ಇರಲ್ಲ, ಜನರು ಉಚಿತವಾಗಿ ಕಂಬಳ ವೀಕ್ಷಿಸಬಹುದು. ಆಹಾರ ಮತ್ತಿತರ ಮಳಿಗೆಗಳ 150 ಕೌಂಟರ್ಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಇಲ್ಲಿ ಹಣ ಕೊಟ್ಟು ಊಟ, ತಿಂಡಿಗಳನ್ನು ಸವಿಯಬಹುದು. 25 ರಿಂದ 30 ಸಾವಿರ ಜನರು ಏಕಕಾಲದಲ್ಲಿ ನಿಂತು ನೋಡುವ ವ್ಯವಸ್ಥೆಯಿದೆ ಎಂದು ಕಂಬಳ ಸಂಘಟಕ  ಅಶೋಕ್ ಕುಮಾರ್  ರೈ ತಿಳಿಸಿದರು.

400 ಮಂದಿ ಕಾರ್ಯಕರ್ತರನ್ನು ಸಂಚಾರ ನಿರ್ವಹಣೆಗಾಗಿ ನಿಯೋಜಿಸಲಾಗಿದೆ.. ಪೊಲೀಸ್ ಸಿಬ್ಬಂದಿಯೂ ಇರಲಿದ್ದಾರೆ. ಹೀಗಾಗಿ, ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವ್ಯವಸ್ಥೆ ಕೈಗೊಳ್ಳಲಾಗಿದೆ,” ಎಂದು ಅವರು ಹೇಳಿದರು. ಇಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳಕ್ಕಾಗಿ ಕೋಣಗಳನ್ನು ನೀರಿಗೆ ಇಳಿಸಿ ಅವುಗಳಿಗೆ ತಾಲೀಮು ನೀಡಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read