BIG UPDATE : ಸೆ. 26ರಂದು ‘ಬೆಂಗಳೂರು ಬಂದ್’ : ಏನಿರುತ್ತೆ, ಏನಿರಲ್ಲ..? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತ ಪರ ವಿವಿಧ ಸಂಘಟನೆಗಳು ಸೆ.26 ರಂದು ‘ಬೆಂಗಳೂರು ನಗರ’ ಬಂದ್ ಘೋಷಿಸಿದೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಬೆಂಗಳೂರು, ಮಂಡ್ಯ, ಮದ್ದೂರು ಭಾಗದಲ್ಲಿ ಅನ್ನದಾತನ ಆಕ್ರೋಶ ತೀವ್ರ ಸ್ವರೂಪ ಪಡೆದಿದೆ. ಸೆ.26 ರಂದು ‘ಬೆಂಗಳೂರು ನಗರ’ ಬಂದ್ ಮಾಡುವುದಾಗಿ ರೈತ ಮುಖಂಡ, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ್ ಕುಮಾರ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಸೆ.26 ರಂದು ಬೆಂಗಳೂರಿನಲ್ಲಿ ಏನಿರುತ್ತೆ..? ಏನಿರಲ್ಲ ಎಂಬುದನ್ನು ನೋಡುವುದಾದರೆ..ಇಲ್ಲಿದೆ ಮಾಹಿತಿ

ಅಂಗಡಿ ಮುಂಗಟ್ಟುಗಳು ಬಂದ್ :  ಬೆಂಗಳೂರು ಬಂದ್ ನಿಂದ ಅಂಗಡಿ ಮುಂಗಟ್ಟುಗಳು ಬಂದ್ ಆಗಿರಲಿದೆ ಎನ್ನಲಾಗಿದ್ದು, ಸಾರ್ವಜನಿಕರು ಮುಂಚಿತವಾಗಿ ದಿನಸಿ ಸಾಮಾನು ಕೊಂಡುಕೊಳ್ಳುದು ಉತ್ತಮ.

ಸಾರಿಗೆ ಸೇವೆ ಬಂದ್ : ಮುಖ್ಯವಾಗಿ ಸಾರ್ವಜನಿಕ ಸಾರಿಗೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಹೇಳಲಾಗಿದೆ. ಬೆಂಗಳೂರು ಬಂದ್ ಸಂದರ್ಭದಲ್ಲಿ ಬಿಎಂಟಿಸಿ ಬಸ್ ಸಂಚಾರ ನಡೆಸೋದು ಅನುಮಾನ, ಕೆ ಎಸ್ ಆರ್ ಟಿಸಿ ಬಸ್ ಸಂಚಾರವೂ ಸ್ಥಗಿತಗೊಳ್ಳೋ ಸಾಧ್ಯತೆ ಇದೆ.

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ :   ಸೆ.26 ರಂದು ಶಾಲಾ ಕಾಲೇಜುಗಳು ಬಂದ್ ಆಗುವ ನಿರೀಕ್ಷೆಯಿದೆ. ಈಗಾಗಲೇ ಶಾಲಾ ಕಾಲೇಜುಗಳಿಗೆ ರಜೆ ನೀಡುವಂತೆ ಮನವಿ ಮಾಡಿರುವ ಹಿನ್ನೆಲೆ ಶಾಲಾ ಕಾಲೇಜುಗಳು ಬಂದ್ ಆಗುವ ನಿರೀಕ್ಷೆಯಿದೆ.ಕೆಲವು ಸರ್ಕಾರಿ ಕಚೇರಿಗಳು ಬಂದ್ ಆಗುವ ಸಾಧ್ಯತೆಯಿದೆ.

ಹೋಟೆಲ್, ರೆಸ್ಟೋರೆಂಟ್ ಬಂದ್ : ಸೆ.26 ರಂದು ಹೋಟೆಲ್, ರೆಸ್ಟೋರೆಂಟ್ ಬಂದ್ ಆಗುವ ಸಾಧ್ಯತೆಯಿದೆ.

ಏನಿರುತ್ತೆ..?

ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೇವೆಗಳು, ಅಗ್ನಿಶಾಮಕ ಸೇವೆ, ದೊಡ್ಡ ಸೂಪರ್ಮಾರ್ಕೆಟ್ಗಳು ಮತ್ತು ದಿನಸಿ ಅಂಗಡಿಗಳು ಬಂದ್ ದಿನ ತೆರೆದಿರುವ ಸಾಧ್ಯತೆಯಿದೆ. ಪೊಲೀಸ್ ಸೇವೆ ಎಂದಿನಂತೆ ಇರಲಿದೆ.

ಮೆಡಿಕಲ್, ಹಾಲಿನ ಬೂತ್, ಆಸ್ಪತ್ರೆಗಳು ಎಂದಿನಂತೆ ಓಪನ್ ಇರಲಿದೆ.

ಕರ್ನಾಟಕ ಜಲಸಂರಕ್ಷಣಾ ಸಮಿತಿಯಿಂದ ಫ್ರೀಡಂ ಪಾರ್ಕ್ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಬೆಂಗಳೂರಿನ ಪ್ರಮುಖ ಅಪಾರ್ಟ್ ಮೆಂಟ್ ಅಸೋಸಿಯೇಷನ್, ಲೇಔಟ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಐಟಿ ಕಂಪನಿಗಳು ಭಾಗಿಯಾಗಿದ್ದವು. ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತ ಪರ ವಿವಿಧ ಸಂಘಟನೆಗಳು ಸೆ.26 ರಂದು ‘ಬೆಂಗಳೂರು ನಗರ’ ಬಂದ್ ಘೋಷಿಸಿದೆ.

ಸರ್ಕಾರ ರಾಜ್ಯದ ರೈತರನ್ನು ಬಲಿ ಕೊಡುತ್ತಿದೆ

ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಘನತೆಯನ್ನು ಹಾಳು ಮಾಡುತ್ತಿದೆ. ಯೋಗ್ಯತೆ ಇದ್ದರೆ ರಾಜಧಾನಿಯ ಸಮಸ್ಯೆ ಬಗೆಹರಿಸಲಿ, ಇಲ್ಲದಿದ್ದರೆ ರಾಜಿನಾಮೆ ನೀಡಲಿ. ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ನೆಲ, ಜಲ ರಕ್ಷಣೆಯ ವಿಚಾರದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.

ತಮಿಳುನಾಡಿನವರು ಕೇಳುವ ಮೊದಲೇ ನೀರು ಹರಿಸಿದ ಕಾಂಗ್ರೆಸ್ ಸರ್ಕಾರ ಇದೀಗ ರಾಜ್ಯದಲ್ಲಿ ಬರಗಾಲವಿದ್ದರೂ ರಾಜಕೀಯ ಸಂಬಂಧಕ್ಕಾಗಿ ನೀರು ಬಿಡುವ ಮೂಲಕ ನಮ್ಮ ರಾಜ್ಯದ ರೈತರನ್ನು ಬಲಿ ಕೊಡುತ್ತಿದೆ. ಡಿಎಂಕೆ ಪರವಾಗಿ ಚುನಾವಣಾ ಪ್ರಚಾರ ಮಾಡಿರುವ ಸಿಎಂ, ಡಿಸಿಎಂ ಇದೀಗ ಕಾವೇರಿ ವಿಷಯದಲ್ಲಿ ಮಾತನಾಡದಿರುವುದು ವಿಪರ್ಯಾಸ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read