ಗಮನಿಸಿ : 5696 ರೈಲ್ವೆ ‘ಅಸಿಸ್ಟಂಟ್ ಲೋಕೋ ಪೈಲಟ್’ ಹುದ್ದೆಗೆ ಅರ್ಜಿ ಹಾಕಿದವರಿಗೆ ‘RRB’ ಮಹತ್ವದ ಸೂಚನೆ..!

ಭಾರತೀಯ ರೈಲ್ವೆ ಸಚಿವಾಲಯವು ಒಟ್ಟು 5696 ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳ ಭರ್ತಿಗಾಗಿ ಕಳೆದ ಫೆಬ್ರುವರಿ ತಿಂಗಳಲ್ಲಿ ಅರ್ಜಿ ಸ್ವೀಕರಿಸಿತ್ತು. ಈ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಆರ್ ಆರ್ ಬಿ ಮಹತ್ವದ ಸೂಚನೆ ನೀಡಿದೆ.

ಅರ್ಜಿ ತಿರಸ್ಕೃತವಾಗದಿರಲು ಸೂಕ್ತ ಪಾಸ್ಪೋರ್ಟ್ ಅಳತೆ ಭಾವಚಿತ್ರ, ಸಹಿ ಫೋಟೋ ಅಪ್ಲೋಡ್ ಮಾಡಲು ಸೂಚನೆ ನೀಡಿದೆ. ಯಾವ ಅಭ್ಯರ್ಥಿಗಳ ಫೋಟೋ, ಸಹಿ ಸ್ಕ್ಯಾನ್ ಕಾಪಿ ಸರಿಯಾದ ಅಳತೆಯಲ್ಲಿ ಅಪ್ಲೋಡ್ ಮಾಡಲಾಗಿಲ್ಲವೋ ಅವರಿಗೆ ಇ-ಮೇಲ್ ಹಾಗೂ ಎಸ್ಎಂಎಸ್ ಮಾಡಲಾಗುತ್ತದೆ. ಅಂತಹವರು ನಿಮ್ಮ ಅರ್ಜಿ ತಿರಸ್ಕೃತವಾಗಬಾರದು ಎಂದರೆ ಅಧಿಸೂಚನೆಯಲ್ಲಿ ತಿಳಿಸಿರುವ ಅಳತೆಯ ಫ್ರೆಶ್ ಭಾವಚಿತ್ರ, ಸಹಿ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಬೇಕು ಎಂದಿದೆ.

ಆರ್ಆರ್ಬಿ ದಿನಾಂಕ: 27-05-2024 ರಿಂದ 31-05-2024 ರ ರಾತ್ರಿ 11-59 ರವರೆಗೆ ಲಿಂಕ್ ಆ್ಯಕ್ಟಿವೇಟ್ ಮಾಡಲಿದ್ದು, ಈ ದಿನಾಂಕದೊಳಗೆ ಫೋಟೋ, ಸಹಿ ಅಪ್ ಲೋಡ್ ಮಾಡಲು ಸೂಚನೆ ನೀಡಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ : 9592001188, 01725653333 ಸಂಪರ್ಕಿಸಬಹುದಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read