ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2025-26ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಯುಪಿಎಸ್‌ಸಿ/ಕೆಎಎಸ್ ಗೆಜೆಟೆಡ್ ಪ್ರೊಬೇಷನಲ್ ವಸತಿಯುಕ್ತ ಪರೀಕ್ಷಾ ಪೂರ್ವ ತರಬೇತಿಯನ್ನು ಬೆಂಗಳೂರಿನ ಹಜ್ ಭವನದಲ್ಲಿ ಹಾಗೂ ಕೆಪಿಎಸ್‌ಸಿ ಗ್ರೂಪ್ ‘ಸಿ’ ಆರ್‌ಆರ್‌ಬಿ ಮತ್ತು ಎಸ್‌ಎಸ್‌ಸಿ ಪರೀಕ್ಷಾ ಪೂರ್ವ ತರಬೇತಿಯುನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ನೀಡಲಾಗುತ್ತಿದ್ದು, ಅರ್ಹ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿಬೇಕು. ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಹೊಂದಿರಬೇಕು. ಅಭ್ಯರ್ಥಿಯ ವಯೋಮಿತಿ ಯುಪಿಎಸ್‌ಸಿ/ಕೆಎಎಸ್ ಗೆಜೆಟೆಡ್ ಪ್ರೊಬೇಷನಲ್, ಕೆಪಿಎಸ್‌ಸಿ ಗ್ರೂಪ್ ‘ಸಿ’ ತರಬೇತಿಗೆ 21 ರಿಂದ 35 ವರ್ಷಗಳು ಹಾಗೂ ಆರ್‌ಆರ್‌ಬಿ ಮತ್ತು ಎಸ್‌ಎಸ್‌ಸಿ ತರಬೇತಿಗಳಿಗೆ 30 ವರ್ಷಗಳು ಮೀರಿರಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರಿಯಲ್ಲಿರುವ ಅಭ್ಯರ್ಥಿಗಳು ಮತ್ತು ಹಿಂದಿನ ಸಾಲಿನಲ್ಲಿ ಐಎಎಸ್ /ಕೆಎಎಸ್ ತರಬೇತಿ ಪಡೆದ ಅಭ್ಯರ್ಥಿಗಳು ಅರ್ಹರಿರುವುದಿಲ್ಲ.
ಆಸಕ್ತರು ಜಾಲತಾಣ https://sevasindhuservices.karnataka.gov.in ಲಿಂಕ್ ಮೂಲಕ ಆಗಸ್ಟ್ 02 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://dom.karnataka.gov.in ನ್ನು ಅಥವಾ ಜಿಲ್ಲಾ ಕಚೇರಿಯನ್ನು ಖುದ್ದಾಗಿ ಹಾಗೂ ದೂ.ಸಂ.: 08182-220206 ನ್ನು ಹಾಗೂ ಶಿವಮೊಗ್ಗ ಅಲ್ಪಸಂಖ್ಯಾತರ ಜಿಲ್ಲಾ ಮಾಹಿತಿ ಕೇಂದ್ರದ ದೂ.ಸಂ-7676888388, ಭದ್ರಾವತಿ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರ-9538853680, ತೀರ್ಥಹಳ್ಳಿ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರ-8861982835, ಸೊರಬ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರ- 9513815513, ಶಿಕಾರಿಪುರ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರ- 7829136724, ಹೊಸನಗರ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರ- 9008447029, ಸಾಗರ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರ-7338222907 ಗೆ ಸಂಪರ್ಕಿಸುವುದು ಎಂದು ಪ್ರಕಟಣೆ ತಿಳಿಸಿದೆ.