ಗಮನಿಸಿ: ಡಿ.22 ರಿಂದ 26ರ ವರೆಗೆ ಮುಳ್ಳಯ್ಯನಗಿರಿ ಸೇರಿದಂತೆ ವಿವಿಧ ತಾಣಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ‘ನಿರ್ಬಂಧ’

ಭೂಮಿ ಮೇಲಿನ ಸ್ವರ್ಗ ಈ ಮುಳ್ಳಯನಗಿರಿ- Kannada Prabha

ಪ್ರವಾಸಿಗರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ದತ್ತ ಜಯಂತಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಬಳಿಯ ವಿವಿಧ ತಾಣಗಳಿಗೆ ಡಿಸೆಂಬರ್ 22 ರಿಂದ 26 ರ ವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಭಾನುವಾರದಂದು ಬಿಜೆಪಿ ಮುಖಂಡ ಸಿ.ಟಿ. ರವಿ ಸೇರಿದಂತೆ ನೂರಾರು ಕಾರ್ಯಕರ್ತರು ಚಿಕ್ಕಮಗಳೂರಿನ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಾತ್ರೇಯ ಸ್ವಾಮಿಗೆ ಪೂಜೆ ನೆರವೇರಿಸಿ ದತ್ತ ಜಯಂತಿ ಮಾಲಾಧಾರಣೆ ಮಾಡಿದ್ದಾರೆ.

ಹತ್ತು ದಿನಗಳ ಕಾಲ ದತ್ತ ಜಯಂತಿ ಕಾರ್ಯಕ್ರಮ ನಡೆಯಲಿದ್ದು, 25ರಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ, 26ರಂದು ದತ್ತ ಪಾದುಕೆ ದರ್ಶನವನ್ನು ಮಾಲಾಧಾರಿಗಳು ಮಾಡಲಿದ್ದಾರೆ. ದತ್ತ ಜಯಂತಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 22 ರಿಂದ 26ರ ವರೆಗೆ ಪ್ರವಾಸಿಗರಿಗೆ ಕೆಲವೊಂದು ತಾಣಗಳ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read