ಗಮನಿಸಿ : ರಾಜ್ಯದಲ್ಲಿ ಇಂದಿನಿಂದ 3 ದಿನ ‘ಎಸ್ಕಾಂ’ ಆನ್ ಲೈನ್ ಸೇವೆ ಬಂದ್, ಬಿಲ್ ಪಾವತಿಯೂ ಇರಲ್ಲ

ಬೆಂಗಳೂರು : ರಾಜ್ಯದ ಐದೂ ಎಸ್ಕಾಂಗಳ ವ್ಯಾಪ್ತಿಯಲ್ಲಿ ವೆಬ್ ಪೋಟರ್ಲ್ ಗೆ ಸಂಬಂಧಿಸಿದಂತೆ ತುರ್ತು ತಾಂತ್ರಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆ ಇಂದಿನಿಂದ 3 ದಿನ ಆನ್ಲೈನ್ ಸೇವೆ ಬಂದ್ ಆಗಲಿದೆ.

ನ.24 ರಂದು ಮಧ್ಯಾಹ್ನ 12 ಗಂಟೆಯಿಂದ ನ.26 ರಂದು ಬೆಳಗ್ಗೆ 11.59 ಗಂಟೆವರೆಗೆ ಎಲ್ಲಾ ರೀತಿಯ ಆನ್ ಲೈನ್ ಸೇವೆ ಸ್ಥಗಿತಗೊಳ್ಳಲಿದೆ. 98 ನಗರ ಹಾಗೂ ಪಟ್ಟಣಗಳಲ್ಲಿ ಸೇವೆಗಳು ಅಲಭ್ಯವಾಗಲಿವೆ. ಈ ಪ್ರದೇಶಗಳಲ್ಲಿ ಮಾಹಿತಿ ತಂತ್ರಜ್ಞಾನ ಸೇವೆಗಳಿಗೆ ಸಂಬಂಧಿಸಿದ ತಂತ್ರಾಂಶಗಳು ಹಾಗೂ ಹಾರ್ಡ್ವೇರ್ಗಳನ್ನು ಅಪ್ಡೇಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಆನ್ಲೈನ್ ಸೇವೆಯನ್ನು ಬಂದ್ ಮಾಡಲಾಗುತ್ತಿದೆ.
ಈ ಹಿನ್ನೆಲೆ ಹೊಸ ವಿದ್ಯುತ್ ಸಂಪರ್ಕ ನೋಂದಣಿ

ಆನ್ ಲೈನ್ ಹಣ ಪಾವತಿ,  ಕೌಂಟರ್ ಗಳಲ್ಲಿ ನಗದು ಪಾವತಿ ಸೇರಿದಂತೆ ಇನ್ನಿತರ ಸೇವೆಗಳು ಅಲಭ್ಯವಾಗಲಿವೆ.
ವಿವಿಧ ಪೋರ್ಟಲ್ ಗಳಲ್ಲಿರುವ ಡಾಟಾವನ್ನು ನೂತನ ಪೋರ್ಟಲ್ ಗೆ ವರ್ಗಾವಣೆ ಮಾಡುವ ಕೆಲಸ ನಡೆಯುವ ಹಿನ್ನೆಲೆ ಆನ್ ಲೈನ್ ಸೇವೆ ಸ್ಥಗಿತಗೊಳಿಸಲಾಗಿದೆ.2 ದಿನ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ಸೇವೆ ಇರಲ್ಲ.ಬೆಸ್ಕಾಂ, ಸೆಸ್ಕ್ ಮೈಸೂರು, ಮೆಸ್ಕಾಂ-ಮಂಗಳೂರು, ಜೆಸ್ಕಾಂ ಕಲಬುರಗಿ, ಹೆಸ್ಕಾಂ ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯ ಜನರಿಗೆ ಸಮಸ್ಯೆಯಾಗಲಿದೆ.

ಬೆಂಗಳೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು. ಹಿರಿಯೂರು. ಹಾಗೂ ಮೈಸೂರಿನ ಮಳವಳ್ಳಿ, ನಂಜನಗೂಡು. ಚಾಮರಾಜನಗರ. ಬಂಟ್ವಾಳ, ಕಡೂರು, ಮಂಗಳೂರು. ಭದ್ರಾವತಿ, ಚಿಕ್ಕಮಗಳೂರು. ಶಿವಮೊಗ್ಗ ಸೇರಿದಂತೆ ಹಲವು ಭಾಗದ ಜನರಿಗೆ ಸಮಸ್ಯೆಯಾಗಲಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read