ಚಿತ್ರದುರ್ಗ : ಪೌರಾಡಳಿತ ನಿದೇಶನಾಲಯ 2025-2026 ಸಾಲಿಗೆ ಮಾರುಕಟ್ಟೆ ದರದ ಮಾರ್ಗಸೂಚಿ ಆಧರಿಸಿ, ನಿಯಮಾನುಸಾರ ಹಿರಿಯೂರು ನಗರಸಭೆಯ ವ್ಯಾಪ್ತಿಯ ಆಸ್ತಿ ತೆರಿಗೆ ದರವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ.
ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವ ಸಾರ್ವಜನಿಕರು ಏಪ್ರಿಲ್ 30ರ ಒಳಗೆ ಆಸ್ತಿ ತೆರಿಗೆ ಪಾವತಿಸಿದರೆ, ಶೇ.5ರಷ್ಟು ರಿಯಾಯಿತಿ ದೊರೆಯಲಿದೆ. ಈ ಅವಕಾಶವನ್ನು ಬಳಸಿಕೊಂಡು ಆಸ್ತಿ ತೆರಿಗೆ ಪಾವತಿಸಿ, ನಗರದ ಅಭಿವೃದ್ಧಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಪೌರಾಯುಕ್ತರು ಕೋರಿದ್ದಾರೆ.