ಸೋರೆಕಾಯಿ ಬಳಸಿ ಮಾಡಬಹುದು ಆರೋಗ್ಯಕರ ಮೃದುವಾದ ಇಡ್ಲಿ

ದೇಹಕ್ಕೆ ತಂಪಾದ ಸೋರೆಕಾಯಿ ಇಡ್ಲಿ#Bottle Gourd Rava Idli#instant rava idli#instant Idli recipe. - YouTube

ಮಲ್ಲಿಗೆ ಇಡ್ಲಿ, ರವೆ ಇಡ್ಲಿ, ತಟ್ಟೆ ಇಡ್ಲಿಯಂತೆ ಚಪ್ಪರಿಸಿ ತಿನ್ನಬಹುದಾದ ಇನ್ನೊಂದು ಬಗೆಯ ಇಡ್ಲಿ ಸೋರೆಕಾಯಿ ಇಡ್ಲಿ. ನೆನಪಾದ ಕೂಡಲೇ ಮಾಡಿ ಮೆಲ್ಲಬಹುದು. ಸುಲಭವಾದ ಸೋರೆಕಾಯಿ ಇಡ್ಲಿಗೆ ಬೇಕಾದ ಸಾಮಗ್ರಿ ಹಾಗೂ ಮಾಡುವ ವಿಧಾನ ಇಲ್ಲಿದೆ ನೋಡಿ.

ತುರಿದ ಸೋರೆಕಾಯಿ – 1 ಕಪ್
ಅಕ್ಕಿ ರವೆ – 1 ಕಪ್
ಕ್ಯಾರೆಟ್ ತುರಿ – ಅರ್ಧ ಕಪ್
ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ – 2-3
ಮೊಸರು -1 ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಗೋಡಂಬಿ – ನಾಲ್ಕೈದು
ಉಪ್ಪು – ರುಚಿಗೆ ತಕ್ಕಷ್ಟು

ವಿಧಾನ

ಮೊಸರಿನಲ್ಲಿ ರವೆ, ಸೋರೆಕಾಯಿ, ಕ್ಯಾರೆಟ್ ತುರಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಅರ್ಧ ಗಂಟೆ ನೆನೆಸಿ. ಸಾಸಿವೆ, ಇಂಗು, ಹಸಿ ಮೆಣಸಿನಕಾಯಿ, ಉದ್ದಿನಬೇಳೆಯನ್ನು ಒಗ್ಗರಣೆ ಮಾಡಿಕೊಂಡು ಇಡ್ಲಿ ಮಿಶ್ರಣಕ್ಕೆ ಬೆರೆಸಿ ಅಗತ್ಯ ಇರುವಷ್ಟು ಉಪ್ಪು ಹಾಕಿ. ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿ. ಇಡ್ಲಿ ಹೆಚ್ಚು ಮೃದುವಾಗಿ ಬೇಕೆಂದರೆ ಯಾವುದೇ ಫ್ರೂಟ್ ಸಾಲ್ಟ್ ಅಥವಾ ಇನೋವನ್ನು ಎರಡು ಚಿಟಿಕೆ ಬಳಸಬಹುದು. ಫ್ರೂಟ್ ಸಾಲ್ಟ್ ಹಾಕಿದ ನಂತರ ಹೆಚ್ಚು ನೆನೆಯಲು ಬಿಡದೇ ಇಡ್ಲಿ ತಟ್ಟೆಗೆ ಎಣ್ಣೆ ಅಥವಾ ತುಪ್ಪ ಸವರಿ ಮೊದಲು ಗೋಡಂಬಿ ಇಟ್ಟು ನಂತರ ಹಿಟ್ಟಿನ ಮಿಶ್ರಣವನ್ನು ಹಾಕಿ ಹಬೆಯಲ್ಲಿ 15 ನಿಮಿಷ ಬೇಯಿಸಿದರೆ ಘಮಘಮಿಸುವ ಸೊರೇಕಾಯಿ ಇಡ್ಲಿ ರೆಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read