‘ಕಭಿ ಖುಷಿ ಕಭಿ ಗಮ್’ ನಲ್ಲಿ ಕಾಜೋಲ್ ಬದಲಿಗೆ ಮೊದಲು ಯಾರು ನಟಿಸಲಿದ್ದರು ಗೊತ್ತಾ ? ಸಿಕ್ರೇಟ್ ರಿವೀಲ್ ಮಾಡಿದ ಕರಣ್ ಜೋಹರ್

ಕಭಿ ಖುಷಿ…… ಕಭಿ ಗಮ್……. ಬಾಲಿವುಡ್ ಸಿನೆಮಾ ಯಾರಿಗೆ ನೆನಪಿರಲಿಕ್ಕಿಲ್ಲ. ಇದು ಬಾಲಿವುಡ್‌ನ ಎವರ್‌ಗ್ರೀನ್ ಸಿನೆಮಾ. ಈ ಸಿನೆಮಾದಲ್ಲಿ ಬಾಲಿವುಡ್‌ನ ಘಟಾನುಘಟಿ ನಟರಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಹೃತಿಕ್ ರೋಶನ್ ಹಾಗೆಯೇ ನಟಿಯರಾದ ಕಾಜೋಲ್, ಕರೀನಾ ಕಪೂರ್‌, ಜಯಬಾಧುರಿ ಮೊದಲಾದವರು ನಟಿಸಿದ್ದರು. ಇವರ ಹೊರತು ಈ ಸಿನೆಮಾ ಕಲ್ಪಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ.

ಈ ಸಿನೆಮಾದಲ್ಲಿ ಪ್ರತಿಯೊಬ್ಬರ ಪಾತ್ರ, ಭಿನ್ನವಾಗಿತ್ತು. ಅದರಲ್ಲೂ ನಟಿ ಕಾಜೋಲ್ ಹಾಗೂ ಪೂ ಎಂದೇ ಫೇಮಸ್ ಆಗಿದ್ದ ಕರೀನಾ ಕಪೂರ್ ಇಂದಿಗೂ ಎಲ್ಲರಿಗೂ ಇಷ್ಟವಾಗೋ ಪಾತ್ರಗಳಾಗಿವೆ. ಇತ್ತೀಚೆಗೆ ನಿದೇರ್ಶಕ ಕರಣ್ ಜೋಶರ್ ಖಾಸಗಿ ಇಂಟರ್‌ವ್ಯೂ ಒಂದರಲ್ಲಿ ಈ ಸಿನೆಮಾದ ಕುರಿತಾದ ವಿಷಯವೊಂದನ್ನ ಬಹಿರಂಗಪಡಿಸಿದ್ದಾರೆ. ಅಸಲಿಗೆ ಈ ಸಿನೆಮಾದ ಮುಖ್ಯ ಪಾತ್ರಧಾರಿಯಾಗಿದ್ದ ಕಾಜೋಲ್, ಅವರ ಮೊದಲ ಆಯ್ಕೆ ಆಗಿರಲಿಲ್ಲ ಎಂದು ಹೇಳಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.

ಅಸಲಿಗೆ ನಟಿ ಕಾಜೋಲ್ ಹಾಗೂ ನಟ ಅಜಯ್ ದೇವಗನ್ ಆಗಷ್ಟೇ ಮದುವೆ ಆಗಿದ್ದರು. ಆದ್ದರಿಂದ ಕಾಜೋಲ್ ಬ್ರೇಕ್ ತೆಗೆದುಕೊಳ್ಳಬಹುದು ಅನ್ನೋ ಕಾರಣಕ್ಕಾಗಿ, ಕರಣ್, ನಟಿ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ತಮ್ಮ ಸಿನೆಮಾಗೆ ಮೊದಲ ಆಯ್ಕೆಯಾಗಿತ್ತು ಎಂದು ಹೇಳಿದ್ದಾರೆ.

ಆದರೆ ನಟಿ ಕಾಜೋಲ್ ಅವರಿಗೆ ಈ ಪಾತ್ರ ಇಷ್ಟವಾಗಿದ್ದರಿಂದ, ತಾವೇ ಈ ಪಾತ್ರ ಮಾಡುವುದಾಗಿ ಹೇಳಿದ್ದರು. ಆದ್ದರಿಂದ ಐಶ್ವರ್ಯ ರೈ ಅವರ ಬಳಿ ಹೋಗದೇ ಅವರಿಗೆನೇ ಈ ಪಾತ್ರ ನಟಿಸಲು ಅವಕಾಶ ಮಾಡಿಕೊಡಲಾಯಿತು. ಸದ್ಯಕ್ಕೆ ಕರಣ್ ಮತೊಂದು ‘ರಾಕಿ ಔರ್ ರಾಣಿ ಪ್ರೇಮ್ ಕಹಾನಿ’ ಸಿನೆಮಾ ನಿರ್ದೆಶಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ನಟಿ ಆಲಿಯಾ ಭಟ್ ಹಾಗೂ ನಟ ರಣ್ವೀರ್ ಸಿಂಗ್ ನಟಿಸುತ್ತಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read