ಮದ್ಯದ ಜೊತೆ ಬೇಡವೇ ಬೇಡ ಈ ʼಆಹಾರಗಳʼ ಸೇವನೆ

ಮದ್ಯಪಾನ ಮಾಡುವ ವೇಳೆ ಸ್ನ್ಯಾಕ್ಸ್ ಸೇರಿದಂತೆ ಬಗೆ ಬಗೆ ಆಹಾರವನ್ನು ಸೇವಿಸಲು ಜನರು ಇಷ್ಟಪಡ್ತಾರೆ. ಉಪ್ಪಿನಕಾಯಿ ಸೇರಿದಂತೆ ಹುಳಿ-ಖಾರ-ಉಪ್ಪು ಮಿಶ್ರಿತ ಆಹಾರವನ್ನು ಹೆಚ್ಚು ಸೇವನೆ ಮಾಡ್ತಾರೆ. ಮದ್ಯ ಆರೋಗ್ಯಕ್ಕೆ ಹಾನಿಕರ. ಅದ್ರ ಜೊತೆ ಕೆಲವೊಂದು ಆಹಾರ ಸೇವನೆ ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತದೆ.

ಮದ್ಯದ ಜೊತೆ ಒಣ ಹಣ್ಣು, ಬದಾಮಿ, ಪಿಸ್ತಾ ತಿನ್ನಬಾರದು. ಇದು ಆರೋಗ್ಯವನ್ನು ಹಾಳು ಮಾಡುತ್ತದೆ. ಗೋಡಂಬಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಅಂಶವಿರುತ್ತದೆ. ಮದ್ಯದ ಜೊತೆ ಇದನ್ನು ತಿನ್ನುವುದ್ರಿಂದ ಆರೋಗ್ಯ ಹದಗೆಡುತ್ತದೆ.

ಮದ್ಯಪಾನದ ಜೊತೆ ಕೋಲ್ಡ್ ಡ್ರಿಂಕ್ ಹಾಗೂ ಸೋಡಾ ಮಿಕ್ಸ್ ಮಾಡಿದ್ರೆ ಅಪಾಯ ನಿಶ್ಚಿತ. ಮದ್ಯಪಾನದ ಜೊತೆ ಕೋಲ್ಡ್ ಡ್ರಿಂಕ್ ತೆಗೆದುಕೊಳ್ಳುವುದ್ರಿಂದ ದೇಹ ನಿರ್ಜಲೀಕರಣಗೊಳ್ಳುತ್ತದೆ.

ಮದ್ಯದ ಜೊತೆ ಕರಿದ ತಿಂಡಿಯನ್ನು ತಿನ್ನಬಾರದು.ಇದ್ರಲ್ಲಿ ಉಪ್ಪಿನ ಪ್ರಮಾಣ ಹೆಚ್ಚಿರುವುದ್ರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ.

ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿಕರ. ಕಡಿಮೆ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಮಾಡುತ್ತಿದ್ದರೂ ಅದ್ರ ಜೊತೆ ಸ್ನ್ಯಾಕ್ಸ್ ಸೇವನೆ ಮಾಡಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read