ಸೆಲೆಬ್ರಿಟಿಯಲ್ಲ, ಸ್ಟಾರ್‌ ಕೂಡ ಅಲ್ಲ ಆದರೂ ಒಂದೇ ರಾತ್ರಿಯಲ್ಲಿ 30 ಲಕ್ಷ ಗಳಿಸ್ತಾನೆ ಈ ಯುವಕ….!

ಹೆಸರು ಓರ್ಹಾನ್‌ ಅವತ್ರಮಣಿ ಉರುಫ್‌ ಒರಿ. ಈತ ಸದ್ಯ ಸೋಷಿಯಲ್ ಮೀಡಿಯಾದ ಸೆನ್ಸೇಷನ್. ಅಷ್ಟೇ ಅಲ್ಲ ಬಾಲಿವುಡ್‌ನ ಬಹುತೇಕ ಎಲ್ಲಾ ಸೆಲೆಬ್ರಿಟಿಗಳ ಆತ್ಮೀಯ ಸ್ನೇಹಿತ. ಬಿಗ್ ಬಾಸ್ 17 ರಿಯಾಲಿಟಿ ಶೋನಲ್ಲಿ ಅತಿಥಿಯಾಗಿ ಕಾಣಿಸಿಕೊಂಡ ಒರಿ ಕೆಲವೊಂದು ಶಾಕಿಂಗ್‌ ಸೀಕ್ರೆಟ್‌ಗಳನ್ನು ಬಹಿರಂಗಪಡಿಸಿದ್ದಾನೆ.

ಒರಿಯ ಜನಪ್ರಿಯತೆ ಮತ್ತು ವಿಲಾಸಿ ಬದುಕಿನ ಬಗ್ಗೆ ಕೇಳಿ ಖುದ್ದು ನಟ ಸಲ್ಮಾನ್‌ ಖಾನ್‌ ಶಾಕ್‌ ಆಗಿದ್ದಾರೆ. ಸೆಲೆಬ್ರಿಟಿಗಳೊಂದಿಗೆ ಫೋಟೋಗೆ ಪೋಸ್‌ ನೀಡುವ ಮೂಲಕ ಒರಿ ಒಮ್ಮೆಲೇ 20-30 ಲಕ್ಷ ರೂಪಾಯಿ ಗಳಿಸ್ತಾರಂತೆ. ಈತನ ವಹಿವಾಟನ್ನೆಲ್ಲ ನೋಡಿಕೊಳ್ಳಲು 5 ಮ್ಯಾನೇಜರ್‌ಗಳಿದ್ದಾರಂತೆ.

ಫೋಟೋ ಕ್ಲಿಕ್ಕಿಸಿಕೊಳ್ಳಲು ಮತ್ತದನ್ನು ಕಾರ್ಯಕ್ರಮಗಳಲ್ಲಿ ಪೋಸ್ಟ್‌ ಮಾಡಲು ಒರಿ ಲಕ್ಷಗಟ್ಟಲೆ ಶುಲ್ಕ ಪಡೀತಾರೆ. ಈ ಫೋಟೋಗಳಿಂದ ಒಂದು ರಾತ್ರಿಯಲ್ಲಿ ಸುಮಾರು 20-30 ಲಕ್ಷ ರೂಪಾಯಿ ಗಳಿಸೋದಾಗಿ ಒರಿ ಖುದ್ದು ಹೇಳಿದ್ದಾರೆ. ತನ್ನ ಸ್ಪರ್ಶದಿಂದ ರೋಗಗಳು ಮತ್ತು ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂದು ಒರಿ ಹೇಳಿಕೊಂಡಿದ್ದಾರೆ.

ಒರಿ ಸದ್ಯ 3 ಫೋನ್‌ಗಳನ್ನು ಬಳಸ್ತಾರಂತೆ. ಬೆಳಗ್ಗೆ ಒಂದು, ಮಧ್ಯಾಹ್ನಕ್ಕೆ ಒಂದು ಮತ್ತು ರಾತ್ರಿಗೆ ಪ್ರತ್ಯೇಕ. ಹೀಗೆ ಮಾಡುವುದರಿಂದ ಫೋನ್‌ನ ಬ್ಯಾಟರಿ ಡಿಸ್ಚಾರ್ಜ್ ಆಗುವುದಿಲ್ಲ ಎಂದಿದ್ದಾರೆ ಈತ. ಒರಿ ಪ್ರತಿನಿತ್ಯ ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಅನ್ನೋದನ್ನೆಲ್ಲ ಮೇಲ್ವಿಚಾರಣೆ ಮಾಡಲು ಪ್ರತ್ಯೇಕ ಮ್ಯಾನೇಜರ್‌ನನ್ನು ನೇಮಕ ಮಾಡಿಕೊಂಡಿದ್ದಾರೆ. ಬಿಗ್‌ ಬಾಸ್‌ ವೇದಿಕೆಯಲ್ಲಿ ಖುದ್ದು ಒರಿ ಈ ರಹಸ್ಯಗಳನ್ನೆಲ್ಲ ಬಹಿರಂಗಪಡಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read