700 ರೂ. ಗೆ ಮಹೀಂದ್ರಾ ಥಾರ್ ಖರೀದಿಸಲು ಬಯಸಿದ ಪುಟ್ಟ ಬಾಲಕ; ಆನಂದ್ ಮಹೀಂದ್ರಾ ನೀಡಿದ್ದಾರೆ ಈ ʼಉತ್ತರʼ

little kid and anand mahindra

ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಕ್ರಿಯಾಶೀಲರಾಗಿರುತ್ತಾರೆ. ಅವರ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿರುತ್ತಾರೆ. ಅನೇಕರು ಕೇಳುವ ಪ್ರಶ್ನೆಗಳಿಗೂ ಅವರು ತಮಾಷೆಯಾಗಿ ಕಾಲೆಳೆಯುತ್ತಾ ಉತ್ತರಿಸುವ ರೀತಿಯಂತೂ ಹಲವರಿಗೆ ಇಷ್ಟವಾಗುತ್ತದೆ. ಅಂತಹ ಮತ್ತೊಂದು ಪ್ರಸಂಗದಲ್ಲಿ ಪುಟ್ಟ ಮಗುವಿನ ಮುಗ್ಧತೆಗೆ ಆನಂದ್ ಮಹೀಂದ್ರಾ ಉತ್ತರಿಸಿರುವ ರೀತಿ ನೆಟ್ಟಿಗರ ಗಮನ ಸೆಳೆದಿದೆ.

ವಿಡಿಯೋವೊಂದರಲ್ಲಿ ನೋಯ್ಡಾ ಮೂಲದ ಚೀಕು ಯಾದವ್ ಎಂಬ ಪುಟ್ಟ ಹುಡುಗ ತನ್ನ ತಂದೆಯೊಂದಿಗೆ ಸಂಭಾಷಣೆ ನಡೆಸುತ್ತಾ ಮಹೀಂದ್ರಾ ಥಾರ್ ಮತ್ತು ಎಕ್ಸ್ ಯುವಿ 700 ಅನ್ನು 700 ರೂಪಾಯಿಗೆ ಕೊಂಡುಕೊಳ್ಳಬಹುದು. ನಿನ್ನ ಬಳಿ 700 ರೂಪಾಯಿ ಇದೆಯೇ ಎಂದು ತಂದೆಯನ್ನು ಮುಗ್ದತೆಯಿಂದ ಪ್ರಶ್ನಿಸಿದ್ದಾನೆ. ಇದನ್ನು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರೊಂದಿಗೆ ಅವರ ಸ್ನೇಹಿತರು ಹಂಚಿಕೊಂಡಿದ್ದಾರೆ.

ಈ ವಿಡಿಯೋವನ್ನ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರಾ, “ನನ್ನ ಸ್ನೇಹಿತ ಸೂನಿ ತಾರಾಪೊರೆವಾಲಾ ಅವರು ನನಗೆ ಇದನ್ನು ಕಳುಹಿಸಿ ನಾನು ಚೀಕುವನ್ನು ಪ್ರೀತಿಸುತ್ತೇನೆ ಎಂದಿದ್ದರು. ನಾನು ಕೂಡ ಎಕ್ಸ್ ಯುವಿ 700 ಚೀಕುವಿನ ಕೆಲವು ಪೋಸ್ಟ್ ಗಳನ್ನು ವೀಕ್ಷಿಸಿದ್ದೇನೆ. ಈಗ ನಾನೂ ಅವನನ್ನು ಪ್ರೀತಿಸುತ್ತೇನೆ. ನನ್ನ ಏಕೈಕ ಸಮಸ್ಯೆ ಏನೆಂದರೆ, ನಾವು ಅವರ ಹಕ್ಕನ್ನು ಮೌಲ್ಯೀಕರಿಸಿದರೆ ಮತ್ತು ಥಾರ್ ಅನ್ನು 700 ರೂ.ಗೆ ಮಾರಾಟ ಮಾಡಿದರೆ ನಾವು ಶೀಘ್ರದಲ್ಲೇ ದಿವಾಳಿಯಾಗುತ್ತೇವೆ” ಎಂದು ಮಹೀಂದ್ರ ಬರೆದಿದ್ದಾರೆ. ಈ ಮೂಲಕ ಮಗುವಿನ ಮುಗ್ಧತೆಯನ್ನು ಮೆಚ್ಚಿಕೊಂಡು ತಮಾಷೆ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಅನೇಕ ನೆಟ್ಟಿಗರು ಚೀಕು ಮಾತಿನಂತೆ ಥಾರ್ ಮತ್ತು ಎಕ್ಸ್ ಯುವಿ 700 ರೂಪಾಯಿಗೆ ಸಿಕ್ಕರೆ ನನಗೊಂದು ನನ್ನ ಹೆಂಡತಿಗೊಂದು ಖರೀದಿಸುತ್ತೇನೆ ಎಂತೆಲ್ಲಾ ತಮಾಷೆ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read