ನೋಯ್ಡಾ: ನೋಯ್ಡಾದ ಜಿಐಪಿ ಮಾಲ್ ಬಳಿಯ ರಸ್ತೆಗಳಲ್ಲಿ ವ್ಯಕ್ತಿಯೊಬ್ಬ ಅತ್ಯಂತ ಅಪಾಯಕಾರಿಯಾಗಿ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದು, ಬೈಕ್ ಸ್ಟಂಟ್ ಪ್ರದರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದನ್ನು ಆರಂಭದಲ್ಲಿ ಆರ್ಯನ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಹಂಚಿಕೊಂಡಿದ್ದಾರೆ. ಬೈಕ್ ಸ್ಟಂಟ್ ವಿಡಿಯೋ ವೈರಲ್ ಆಗಿದೆ. ಪೊಲೀಸರು ವೈರಲ್ ದೃಶ್ಯಾವಳಿಗಳನ್ನು ಗಮನಿಸಿ ಈ ಬಗ್ಗೆ ತನಿಖೆ ನಡೆಸಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ನೋಯ್ಡಾದ ಜನನಿಬಿಡ ಜಿಐಪಿ (ದಿ ಗ್ರೇಟ್ ಇಂಡಿಯಾ ಪ್ಲೇಸ್) ಮಾಲ್ ರಸ್ತೆಯ ಬಳಿ ದ್ವಿಚಕ್ರ ವಾಹನವನ್ನು ಸವಾರಿ ಮಾಡುವಾಗ ಸೈಡ್ ಟಿಲ್ಟ್‌ಗಳ ಜೊತೆಗೆ ಅಪಾಯಕಾರಿ ವ್ಹೀಲಿಂಗ್ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ವಿಡಿಯೋ ವೈರಲ್ ಆದ ಬಳಿಕ ಎಸಿಪಿ ರಜನೀಶ್ ಬೈಕ್ ವಶಪಡಿಸಿಕೊಂಡಿದ್ದು, ಅದರ ಬಗ್ಗೆ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಉತ್ತರ ಪ್ರದೇಶದ ಬರೇಲಿಯಲ್ಲಿ ಮೂರು ಬೈಕ್‌ಗಳಲ್ಲಿ 14 ಪುರುಷರು ಕುಳಿತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿತ್ತು!
NOIDA
बाइक सवार का करतब करते हुए वीडियो वायरल,
वीडियो जीआईपी मॉल के बाहर का है!
PS 39@noidapolice @CP_Noida pic.twitter.com/3K8ZrIEog8— हिमांशु शुक्ल (@himanshu_kanpur) January 12, 2023