ಸ್ಟಾಕ್ ಹೋಂ(ಸ್ವೀಡನ್): ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ನಿಂದ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜೋಯಲ್ ಮೊಕಿರ್, ಫಿಲಿಪ್ ಅಘಿಯಾನ್ ಮತ್ತು ಪೀಟರ್ ಹೊವಿಟ್ ಅವರಿಗೆ ನೀಡಲಾಗಿದೆ.
ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಆಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥ 2025 ರ ಆರ್ಥಿಕ ವಿಜ್ಞಾನದಲ್ಲಿ ಸ್ವೆರಿಜಸ್ ರಿಕ್ಸ್ಬ್ಯಾಂಕ್ ಪ್ರಶಸ್ತಿಯನ್ನು “ನಾವೀನ್ಯತೆ-ಚಾಲಿತ ಆರ್ಥಿಕ ಬೆಳವಣಿಗೆಯನ್ನು ವಿವರಿಸಿದ್ದಕ್ಕಾಗಿ” ಜೋಯಲ್ ಮೊಕಿರ್, ಫಿಲಿಪ್ ಅಘಿಯಾನ್ ಮತ್ತು ಪೀಟರ್ ಹೊವಿಟ್ ಅವರಿಗೆ ನೀಡಲು ನಿರ್ಧರಿಸಿದೆ.
ಒಂದು ಅರ್ಧವನ್ನು “ತಾಂತ್ರಿಕ ಪ್ರಗತಿಯ ಮೂಲಕ ನಿರಂತರ ಬೆಳವಣಿಗೆಗೆ ಪೂರ್ವಾಪೇಕ್ಷಿತಗಳನ್ನು ಗುರುತಿಸಿದ್ದಕ್ಕಾಗಿ” ಮೊಕಿರ್ ಮತ್ತು ಇನ್ನರ್ಧವನ್ನು ಜಂಟಿಯಾಗಿ “ಸೃಜನಶೀಲ ವಿನಾಶದ ಮೂಲಕ ನಿರಂತರ ಬೆಳವಣಿಗೆಯ ಸಿದ್ಧಾಂತಕ್ಕಾಗಿ” ಅಘಿಯಾನ್ ಮತ್ತು ಹೊವಿಟ್ ಅವರಿಗೆ ನೀಡಲು ನಿರ್ಧರಿಸಿದೆ.
1946ರಲ್ಲಿ ನೆದರ್ಲ್ಯಾಂಡ್ಸ್ನಲ್ಲಿ ಜನಿಸಿದ ಜೋಯಲ್ ಮೊಕಿರ್ ಅವರು ಯೇಲ್ ವಿಶ್ವವಿದ್ಯಾಲಯದಿಂದ ಪಿಹೆಚ್ಡಿ ಪಡೆದಿದ್ದಾರೆ. ಯುಎಸ್ನ ನಾರ್ತ್ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು.
1956ರಲ್ಲಿ ಪ್ಯಾರಿಸ್ ನಲ್ಲಿ ಜನಿಸಿದ ಫಿಲಿಪ್ ಅಘಿಯಾನ್ ಅವರು ಕೇಂಬ್ರಿಡ್ಜ್ನ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪಿಹೆಚ್ಡಿ ಪದವಿ ಪಡೆದಿದ್ದಾರೆ. ಕಾಲೇಜ್ ಡಿ ಫ್ರಾನ್ಸ್ ಮತ್ತು INSEAD, ಪ್ಯಾರಿಸ್ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಆ್ಯಂಡ್ ಪೊಲಿಟಿಕಲ್ ಸೈನ್ಸ್ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
1946ರಲ್ಲಿ ಕೆನಡಾದಲ್ಲಿ ಜನಿಸಿದ ಪೀಟರ್ ಹೊವಿಟ್ ಅವರು. ನಾರ್ತ್ವೆಸ್ಟರ್ನ್ ವಿಶ್ವವಿದ್ಯಾಲಯದಿಂದ ಪಿಹೆಚ್ಡಿ ಪದವಿ ಪಡೆದಿದ್ದಾರೆ. ಯುಎಸ್ನ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿವರ್ಹಿಸಿದ್ದಾರೆ.
ಕಳೆದ ಎರಡು ಶತಮಾನಗಳಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಜಗತ್ತು ನಿರಂತರ ಆರ್ಥಿಕ ಬೆಳವಣಿಗೆಯನ್ನು ಕಂಡಿದೆ. ಇದು ಅಪಾರ ಸಂಖ್ಯೆಯ ಜನರನ್ನು ಬಡತನದಿಂದ ಮೇಲಕ್ಕೆತ್ತಿದೆ ಮತ್ತು ನಮ್ಮ ಸಮೃದ್ಧಿಯ ಅಡಿಪಾಯವನ್ನು ಹಾಕಿದೆ. ಈ ವರ್ಷದ ಆರ್ಥಿಕ ವಿಜ್ಞಾನದಲ್ಲಿ ಪ್ರಶಸ್ತಿ ವಿಜೇತರಾದ ಜೋಯಲ್ ಮೊಕಿರ್, ಫಿಲಿಪ್ ಅಘಿಯಾನ್ ಮತ್ತು ಪೀಟರ್ ಹೊವಿಟ್, ನಾವೀನ್ಯತೆ ಮತ್ತಷ್ಟು ಪ್ರಗತಿಗೆ ಹೇಗೆ ಪ್ರಚೋದನೆಯನ್ನು ನೀಡುತ್ತದೆ ಎಂಬುದನ್ನು ವಿವರಿಸುತ್ತಾರೆ.
BREAKING NEWS
— The Nobel Prize (@NobelPrize) October 13, 2025
The Royal Swedish Academy of Sciences has decided to award the 2025 Sveriges Riksbank Prize in Economic Sciences in Memory of Alfred Nobel to Joel Mokyr, Philippe Aghion and Peter Howitt “for having explained innovation-driven economic growth” with one half to Mokyr… pic.twitter.com/ZRKq0Nz4g7