ಫ್ಯಾಮಿಲಿ ವಾಟ್ಸಾಪ್ ಗ್ರೂಪ್ ನಲ್ಲಿ ಬಿಯರ್ ಫೋಟೋ;‌ ರೆಡ್‌ ಹ್ಯಾಂಡ್‌ ಆಗಿ ಸಿಕ್ಕ ಯುವಕನ ಕಥೆ ವೈರಲ್

ಮನೆಯಿಂದ ದೂರ ವಾಸಿಸುತ್ತಿರುವ ಅನೇಕ ಯುವಕರು ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದು, ಆಲ್ಕೋಹಾಲ್ ಕುಡಿಯುವುದು ಮಾಡುತ್ತಾರೆ. ಈ ಕುಡಿತದ ಅಭ್ಯಾಸ ಪೋಷಕರಿಗೆ ತಿಳಿಯದಂತೆ ಎಷ್ಟೇ ಎಚ್ಚರ ವಹಿಸಿದ್ರೂ ಕೆಲವೊಮ್ಮೆ ತಪ್ಪಾಗಿ ಫೋಟೋವನ್ನು ಯಾರಿಗೋ ಕಳಿಸಿ ಇನ್ಯಾರಿಗೋ ಕಳಿಸುವುದರಿಂದ ಮನೆಯವರಿಗೆ ವಿಚಾರ ಗೊತ್ತಾಗಿಬಿಡುತ್ತದೆ. ಇದೀಗ ಯುವತಿಯೊಬ್ಬರು ತಮ್ಮ ಸಹೋದರನ ವಾಟ್ಸಾಪ್ ಚಾಟ್ ನ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಹೌದು, ಇದೀಗ ವೈರಲ್ ಆಗಿರುವ ವಾಟ್ಸಾಪ್ ಚಾಟ್‌ನಲ್ಲಿ ಸಾನಿಯಾ ಧವನ್ ಅವರ ಸಹೋದರ, ಬಿಯರ್ ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ಗೆಲುವಿಗಾಗಿ ಇದು ಎಂದು ಶೀರ್ಷಿಕೆ ನೀಡಿ ಬಿಯರ್ ಬಾಟಲ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದನ್ನು ತಪ್ಪಾಗಿ ತಮ್ಮ ಕುಟುಂಬದ ವಾಟ್ಸಾಪ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅವರ ತಂದೆ-ತಾಯಿ ಇಬ್ಬರೂ ಏನಿದು, ನೀನು ಬಿಯರ್ ಕುಡಿಯುತ್ತೀಯಾ ಎಂದು ಪ್ರಶ್ನಿಸಿದ್ದಾರೆ.

ಇನ್ನು ಗ್ರೂಪ್‌ನಿಂದ ಬಿಯರ್ ಚಿತ್ರವನ್ನು ಏಕೆ ಅಳಿಸಿಲ್ಲ ಎಂದು ಸಾನಿಯಾ ಧವನ್ ತನ್ನ ಸಹೋದರನಲ್ಲಿ ಕೇಳಿದ್ದಾರೆ. ಆದಕ್ಕೆ ಆತ ತಾನು ಡಿಲೀಟ್ ಎವ್ರಿವನ್ ಕೊಡುವ ಬದಲು ಡಿಲೀಟ್ಸ್ ಫಾರ್ ಮಿ ಆಪ್ಶನ್ ಕ್ಲಿಕ್ ಮಾಡಿದ್ದಾಗಿ ಅಳುವ ಸಿಂಬಲ್ ನ ಮೆಸೇಜ್ ಹಾಕಿದ್ದಾನೆ. ಸದ್ಯ, ಈ ತಮಾಷೆಯ ವಾಟ್ಸಾಪ್ ಚಾಟ್ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಸದ್ಯ ಈ ಪೋಸ್ಟ್ ಟ್ವಿಟರ್‌ನಲ್ಲಿ 1.1 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಹಲವರು ತಾವು ಕೂಡ ಈ ರೀತಿ ಡಿಲೀಟ್ ಆಪ್ಶನ್ ಕೊಟ್ಟು ಪೇಚಿಗೆ ಸಿಲುಕಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

https://twitter.com/SaniyaDhawan1/status/1662110155545415681?ref_src=twsrc%5Etfw%7Ctwcamp%5Etweetembed%7Ctwterm%5E1662110155545415681%7Ctwgr%5E8160ebd2590c9aa1c2f31483ad259474316df889%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fno-way-woman-shares-hilarious-chat-on-twitter-after-her-brother-mistakenly-sends-beer-can-pic-on-family-group-4070847

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read