ಹದಿಹರೆಯದ ಬಾಲಕನ ಕೋಣೆಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ ತಂದೆ; ವಿಡಿಯೋ ಗೇಮ್ ಚಟವೇ ಕಾರಣವೆಂದ ಮಗ

ಹದಿಹರೆಯದ ಬಾಲಕನೊಬ್ಬನ ಮೇಲೆ ಆತನ ತಂದೆ ಅದ್ಯಾವ ಮಟ್ಟದಲ್ಲಿ ಕಣ್ಣಿಟ್ಟಿದ್ದಾರೆ ಎಂಬ ವಿಚಾರವನ್ನು ರೆಡ್ಡಿಟ್‌ ಪೋಸ್ಟ್ ಒಂದರಲ್ಲಿ ಶೇರ್‌ ಮಾಡಲಾಗಿದೆ.

“ತಮಗೆ ಖಾಸಗಿತನವಿಲ್ಲ ಎಂದು ದೂರುವ ಹದಿಹರೆಯದವರಿಗೆ, ನನ್ನ ಹಾಗೂ ನನ್ನ ಸಹೋದರನ ಕೋಣೆಗಳಲ್ಲಿ ಸಿಸಿ‌ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ,” ಎಂದು ಬರೆದು ಕೋಣೆಯ ಚಿತ್ರವನ್ನು ರೆಡ್ಡಿಟ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.

ಇದಕ್ಕೆ ಕಾರಣವೇನೆಂದು ಕಾಮೆಂಟ್‌ಗಳ ಮೂಲಕ ಪ್ರಶ್ನೆ ಮಾಡಿದ ನೆಟ್ಟಿಗರಿಗೆ ಬಾಲಕನ ಉತ್ತರ ಹೀಗಿದೆ : “ಮೂರು ಗಂಟೆಗಳ ಓದಿನ ಬಳಿಕ ನಾನು ನನ್ನ ಸಹೋದರನ ಪಿಎಸ್‌4 ವಿಡಿಯೋ ಗೇಮ್‌ನಲ್ಲಿ ತಡರಾತ್ರಿ ಆಟವಾಡುತ್ತಾ ಸಿಕ್ಕಿಕೊಂಡಿದ್ದೆ. ಇದಾದ ಬಳಿಕ ನಾನು ಇಡೀ ರಾತ್ರಿ ಹೀಗೆ ವಿಡಿಯೋ ಗೇಮ್ಸ್‌ ಆಡುತ್ತೇನೆ ಎಂದು ತಿಳಿದ ನನ್ನ ತಂದೆ, ನನ್ನ ಹುಟ್ಟುಹಬ್ಬದ ದಿನ ನನ್ನನ್ನು ಮತ್ತೊಮ್ಮೆ ಇದೇ ಸ್ಥಿತಿಯಲ್ಲಿ ಹಿಡಿದಿದ್ದರು,” ಎಂದಿದ್ದಾನೆ.

“ನನ್ನ ಹುಟ್ಟುಹಬ್ಬದ ಎರಡು ದಿನಗಳ ಬಳಿಕ ಅವರು ಈ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಸೋಜಿಗದ ವಿಚಾರವೆಂದರೆ ನಾನು ಟಾಪ್ 10ರಲ್ಲಿರುವ ವಿದ್ಯಾರ್ಥಿ.ನಾನು ಯಾವಾಗಲೂ 90%ಗಿಂತ ಹೆಚ್ಚಿನ ಅಂಕ ಗಳಿಸಿದ್ದೇನೆ. ಹೀಗಾಗಿ ನಾನು ರಾತ್ರಿ ವೇಳೆ ಆಟವಾಡುವುದು ದೊಡ್ಡ ವಿಚಾರವಲ್ಲ,” ಎಂದು ಬಾಲಕ ಹೇಳಿಕೊಂಡಿದ್ದಾನೆ.

“ಸುಳ್ಳು ಹೇಳಬೇಡ ಸಹೋದರ. ನೀನು ಬೇರೇನೋ ಮಾಡಿರುತ್ತೀ. ಹಸ್ತಮೈಥುನ ಮಾಡುತ್ತಾ ಸಿಕ್ಕಿಕೊಂಡಿರುತ್ತೀಯ,” ಎಂದು ಈ ಪೋಸ್ಟ್‌ಗೆ ಫನ್ನಿ ಪ್ರತಿಕ್ರಿಯೆಗಳ ಮೂಲಕ ಬಾಲಕನನ್ನು ತಮಾಷೆ ಮಾಡಿದ್ದಾರೆ ನೆಟ್ಟಿಗರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read