ಬೆಂಗಳೂರು : ಧರ್ಮಸ್ಥಳ ಕೇಸ್ ನಲ್ಲಿ ಯಾರನ್ನೂ ರಕ್ಷಣೆ ಮಾಡಲ್ಲ, ಸತ್ಯ ಹೊರಬರಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಣವ್ ಮೊಹಾಂತಿ ಅವರನ್ನು ಕೇಂದ್ರ ಸೇವೆಗೆ ಕರೆಸಿಕೊಳ್ಳುವ ವಿಚಾರಕ್ಕೂ , ಧರ್ಮಸ್ಥಳದ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು. ಧರ್ಮಸ್ಥಳ ಕೇಸ್ ನಲ್ಲಿ ಯಾರನ್ನೂ ರಕ್ಷಣೆ ಮಾಡಲ್ಲ, ಸತ್ಯ ಹೊರಬರಬೇಕು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಡಿಜಿ ಮಟ್ಟದ ಅಧಿಕಾರಿಗಳನ್ನು ತನಿಖೆಗೆ ನಿಯೋಜಿಸಬೇಕು ಎಂದ ಹೇಳಿದ್ದೆವು, ಆದ್ದರಿಂದ ಮೊಹಾಂತಿ ಅವರನ್ನ ನೇಮಕ ಮಾಡಲಾಗಿದೆ ಎಂದರು. ಈಗ ಕೇಂದ್ರದ ಸೇವೆಗೆ ಅವರನ್ನು ಕರೆಸಿಕೊಳ್ಳುವ ಪಟ್ಟಿಯಲ್ಲಿ ಅವರ ಹೆಸರಿದೆ.ಇನ್ನೂ ಕೂಡ ಈ ಬಗ್ಗೆ ನಾವು ಏನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.
You Might Also Like
TAGGED:'ಧರ್ಮಸ್ಥಳ ಕೇಸ್