ಬೆಂಗಳೂರಿನ ಬಾಡಿಗೆ ಮನೆಯ ರೂಲ್ಸ್​ ನೋಡಿ ಬೆಚ್ಚಿಬಿದ್ದ ಬ್ಯಾಚುಲರ್ಸ್….​!

ಬೆಂಗಳೂರಿನಲ್ಲಿ ಕೆಲವರಿಗೆ ಬಾಡಿಗೆ ಮನೆ ಸಿಗುವುದು ಬಹಳ ಕಷ್ಟವೇ. ಅದರಲ್ಲಿಯೂ ಬ್ಯಾಚುಲರ್​ಗೆ ಬಾಡಿಗೆ ಸಿಗುವುದು ಕಷ್ಟವೇ. ಕೆಲಸ ಹುಡುಕೋಕ್ಕಿಂತ ಮನೆ ಹುಡುಕೋದು ಭಾರೀ ಕಷ್ಟದ ಕೆಲಸ ಎನ್ನುವ ಸ್ಥಿತಿ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಬ್ಯಾಚುಲರ್ಸ್​ಗೆ ಮನೆ ಸಿಗುವುದು ಇನ್ನೂ ಕಷ್ಟವೇ. ಇಲ್ಲಸಲ್ಲದ ನಿಯಮಗಳನ್ನು ಹೇಳುತ್ತಾರೆ. ಅಂಥದ್ದೇ ಒಂದು ನಿಯಮ ಈಗ ವೈರಲ್​ ಆಗಿದೆ.

ಬೆಂಗಳೂರಿನ ಸೊಸೈಟಿಯೊಂದು ಬಾಡಿಗೆದಾರರಾಗಿ ವಾಸಿಸುವ ಅವಿವಾಹಿತರಿಗೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಹೇರಿದ್ದಾರೆ. ಅದರಲ್ಲಿರುವ ನಿಯಮದ ಪ್ರಕಾರ ಅವಿವಾಹಿತರು ರಾತ್ರಿ 10 ಗಂಟೆಯ ನಂತರ ತಮ್ಮ ಫ್ಲ್ಯಾಟ್ ಗಳಿಗೆ ಯಾವುದೇ ಅತಿಥಿಗಳನ್ನು ಕರೆದುಕೊಂಡು ಬರುವಂತಿಲ್ಲ. ಬೆಂಗಳೂರಿನ ಕುಂದನಹಳ್ಳಿ ಗೇಟ್ ಪ್ರದೇಶದಲ್ಲಿರುವ ಸೊಸೈಟಿಯು ತನ್ನ ಮಾರ್ಗಸೂಚಿಗಳಲ್ಲಿ, ಅತಿಥಿಯು ರಾತ್ರಿ ಅಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಮಾಲೀಕರಿಂದ ಇ-ಮೇಲ್ ಮೂಲಕ ಪೂರ್ವಾನುಮತಿ ಪಡೆಯುವಂತೆ ಈ ಬಾಡಿಗೆದಾರರನ್ನು ಕೇಳಿದೆ.

“ರಾತ್ರಿ 10 ಗಂಟೆಯ ನಂತರ ಬ್ಯಾಚುಲರ್ ಗಳು ಈ ಫ್ಲ್ಯಾಟ್ ಗಳಿಗೆ ಯಾವುದೇ ಅತಿಥಿಗಳನ್ನು ಕರೆದುಕೊಂಡು ಬರುವಂತಿಲ್ಲ. ಅತಿಥಿಗಳಿಗೆ ಇಲ್ಲಿ ರಾತ್ರಿ ತಂಗಲು ಅವಕಾಶವಿಲ್ಲ. ಅಗತ್ಯವಿದ್ದರೆ, ಅತಿಥಿಗಳ ಗುರುತಿನ ಪುರಾವೆಗಳನ್ನು ಸಲ್ಲಿಸಬೇಕು. ಮ್ಯಾನೇಜರ್ ಅಥವಾ ಅಸೋಸಿಯೇಷನ್ ಕಚೇರಿಯ ಮಾಲೀಕರಿಂದ ಪೂರ್ವಾನುಮತಿಯನ್ನು ಕೋರಬೇಕು. ಎಂದು ಹೇಳಿದ್ದು, ಅದೀಗ ಭಾರಿ ವೈರಲ್​ ಆಗಿದೆ. ನಿಯಮಗಳನ್ನು ಉಲ್ಲಂಘಿಸಿದರೆ 1000 ರೂಪಾಯಿ ದಂಡ ಬೀಳುತ್ತದೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read