ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೆ ಮಹಾಘಟಬಂಧನ್ ಸೇರಲಿದ್ದಾರೆ ಎಂಬ ವದಂತಿ ಹೆಚ್ಚಾಗಿದೆ. ಯಾಕೆಂದರೆ ಪದೇ ಪದೇ ತಮ್ಮ ಬೆಂಬಲ ಬದಲಿಸಿ ವಿವಿಧ ರಾಜಕೀಯ ಪಕ್ಷ ಸೇರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಕೀಯದಲ್ಲಿ ಪಲ್ಟುಕುಮಾರ್ ಎಂದೇ ಹೆಸರು ಪಡೆದಿದ್ದಾರೆ. ಲೋಕಸಭೆ ಚುನಾವಣೆ ಮುನ್ನ ಮಹಾಘಟಬಂಧನ್ ತೊರೆದು ಎನ್ ಡಿಎ ಗೆ ಬೆಂಬಲ ಸೂಚಿಸಿದ್ದ ನಿತೀಶ್ ಕುಮಾರ್ ಇದೀಗ ಮೋದಿ ಸರ್ಕಾರಕ್ಕೂ ಶಾಕ್ ಕೊಡಲು ಮುಂದಾಗಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ.
ಮಾಹಿತಿ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವೆ ಇತ್ತೀಚೆಗೆ ಪಾಟ್ನಾದಲ್ಲಿ ನಡೆದ ಸಭೆಯ ನಂತರ, ಆರ್‌ಜೆಡಿ ನಾಯಕ ಭಾಯಿ ವೀರೇಂದ್ರ ಅವರು ಬಿಹಾರ ಸಿಎಂ ಆರ್‌ಜೆಡಿಗೆ ಮರಳಬಹುದು ಎಂದು ಹೇಳಿದ್ದಾರೆ. ಸಮಾಜವಾದಿ ಚಿಂತನೆಯಲ್ಲಿ ದೃಢವಾದ ನಂಬಿಕೆ ಹೊಂದಿರುವ ನಿತೀಶ್ ಕುಮಾರ್ ಅವರು ‘ಜಲ್ಲದ್’ (ಗಲ್ಲಿಗೇರಿಸುವವರು) ಭಾರತೀಯ ಜನತಾ ಪಕ್ಷದೊಂದಿಗೆ ಇರಲು ಬಯಸುವುದಿಲ್ಲವಾದ್ದರಿಂದ ಹಿಂತಿರುಗುತ್ತಾರೆ” ಎಂದು ಭಾಯಿ ವೀರೇಂದ್ರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇದರಿಂದಾಗಿ ನಿತೀಶಅ ಕುಮಾರ್ ಅವರ ಸಂಭಾವ್ಯ ರಾಜಕೀಯ ಬದಲಾವಣೆಯ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಈ ಮಧ್ಯೆ ಜೆಡಿಯು ಇಂತಹ ವದಂತಿ “ಆಧಾರರಹಿತ” ಮತ್ತು “ಲಾಲು ಪಕ್ಷವು ಎಷ್ಟು ಬೇಕಾದರೂ ಹಗಲುಗನಸು ಮಾಡಬಹುದು” ಎಂದು ಪ್ರತಿಕ್ರಿಯಿಸಿದೆ.
ಬಿಜೆಪಿಯನ್ನು ಜಲ್ಲಾದ್ ಎಂದು ಕರೆದಿದ್ದಕ್ಕಾಗಿ ಜೆಡಿಯು ಆರ್‌ಜೆಡಿಯನ್ನು ತರಾಟೆಗೆ ತೆಗೆದುಕೊಂಡು, ಇದು ಬಿಹಾರದ ಜನರು ನೀಡಿದ ಜನಾದೇಶಕ್ಕೆ ಮಾಡಿದ ಅವಮಾನ ಎಂದು ಬಣ್ಣಿಸಿದೆ.
https://twitter.com/TimesNow/status/1833335584477028455?ref_src=twsrc%5Etfw%7Ctwcamp%5Etweetembed%7Ctwterm%5E1833335584477028455%7Ctwgr%5Eab6e53f963d6ddfff9969dc019f48f901953fdb6%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ftimesnownews-epaper-dhf729babb066e4159bc8e6ad4fc8cd3b9%2Fnitishwillreturnhesoursrjdleadersbigclaimbjprubbishespaltirumours-newsid-n630261347