‌Video: ಬೆರಗಾಗಿಸುವಂತಿದೆ ಐಪಿಎಲ್ ಹರಾಜು ವೇಳೆ ನೀತಾ ಅಂಬಾನಿ ಧರಿಸಿದ್ದ ವಾಚ್ ಬೆಲೆ…!

ಮುಂಬೈ ಇಂಡಿಯನ್ಸ್‌ ತಂಡದ ಮಾಲೀಕರಾದ ನೀತಾ ಅಂಬಾನಿ ದುಬೈನ ಜೆಡ್ಡಾದಲ್ಲಿ ನಡೆದ 2025 ರ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದ್ದು, ಈ ವೇಳೆ ಅವರು ಧರಿಸಿದ್ದ ದುಬಾರಿ ವಾಚ್‌ ಎಲ್ಲರ ಗಮನ ಸೆಳೆದಿದೆ.

ನೀತಾ ಅಂಬಾನಿಯವರು ತಮ್ಮ ಉಡುಪಿಗೆ ಪೂರಕವಾಗಿ 18-ಕ್ಯಾರೆಟ್ ಚಿನ್ನದ ಬಿಳಿ ರೋಲೆಕ್ಸ್ ಡೇ-ಡೇಟ್ ವಾಚ್ ಆಧರಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ರೋಲೆಕ್ಸ್ ಡೇ-ಡೇಟ್ ಎಂದು ಕರೆಯಲ್ಪಡುವ ನೀತಾ ಅಂಬಾನಿಯವರ ಬೆರಗುಗೊಳಿಸುವ 18-ಕ್ಯಾರೆಟ್ ಚಿನ್ನದ ಬಿಳಿ ಗಡಿಯಾರದ ಬೆಲೆ ಬರೋಬ್ಬರಿ 1.05 ಕೋಟಿ ರೂಪಾಯಿಗಳು.

ರೋಲೆಕ್ಸ್, ಜಿನೀವಾ ಮೂಲದ ಪ್ರಸಿದ್ಧ ಸ್ವಿಸ್ ವಾಚ್‌ಮೇಕರ್, 1905 ರಲ್ಲಿ ಹ್ಯಾನ್ಸ್ ವಿಲ್ಸ್‌ಡಾರ್ಫ್ ಮತ್ತು ಆಲ್ಫ್ರೆಡ್ ಡೇವಿಸ್ ಸ್ಥಾಪಿಸಿದ್ದರು. ನೀತಾ ಅಂಬಾನಿಯವರಂತೆ, ಖ್ಯಾತ ನಟರುಗಳಾದ ಶಾರುಖ್ ಖಾನ್, ಧನುಷ್, ರಾಮ್ ಚರಣ್ ಮತ್ತು ಮೋಹನ್ ಲಾಲ್ ಈ ಐಕಾನಿಕ್ ಐಷಾರಾಮಿ ಬ್ರಾಂಡ್‌ ನ ಕೈಗಡಿಯಾರಗಳನ್ನು ಹೊಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read