ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಿಫಾ ವೈರಸ್ ಪ್ರಕರಣ ದೃಢಪಟ್ಟಿದೆ. ಜಿಲ್ಲೆಯ ವಲಂಚೇರಿಯ ಮಹಿಳೆಯೊಬ್ಬರು ನಿಫಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಅವರು ಪ್ರಸ್ತುತ ಪೆರಿಂಥಲ್ಮನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಗೆ ಕಳೆದ ಒಂದು ವಾರದಿಂದ ಜ್ವರವಿದ್ದು, ಕೆಮ್ಮು ಮತ್ತು ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಂಡಿವೆ. ನಿಫಾ ಸೋಂಕು ಇರಬಹುದು ಎಂದು ಶಂಕಿಸಿ, ಅವರ ಮಾದರಿಗಳನ್ನು ಪುಣೆಯ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಂತರ ಪ್ರಯೋಗಾಲಯವು ಇದು ನಿಫಾ ಸೋಂಕಿನ ಪ್ರಕರಣ ಎಂದು ದೃಢಪಡಿಸಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.