ಶಿವಮೊಗ್ಗ: ಬೈಕ್ ನಿಯಂತ್ರಣ ತಪ್ಪಿ ಬಿದ್ದು ನವ ವಿವಾಹಿತ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಹರೂರು ಗ್ರಾಮದ ಕೆರೆ ಏರಿ ಮೇಲೆ ಸೋಮವಾರ ರಾತ್ರಿ ನಡೆದಿದೆ.
ಸೊರಬ ತಾಲೂಕಿನ ಕುಂಶಿ ಗ್ರಾಮದ ಎಸ್.ಆರ್. ರವಿ(29) ಮೃತಪಟ್ಟ ಯುವಕ. ಸಾಗರದಿಂದ ಕೂಲಿ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಬರುವಾಗ ನಾಯಿ ಅಡ್ಡ ಬಂದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ಮೋರಿ ಕಟ್ಟೆಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ರವಿ ಮೃತಪಟ್ಟಿದ್ದಾರೆ.
ಒಂದು ತಿಂಗಳು ಎಂಟು ದಿನದ ಹಿಂದೆಯಷ್ಟೇ ರವಿ ಮದುವೆಯಾಗಿತ್ತು. ಅವರ ಸಾವಿನಿಂದ ಕುಟುಂಬದವರು ಕಂಗಾಲಾಗಿದ್ದು, ಆಕ್ರಂದನ ಮುಗಿಲು ಮುಟ್ಟುವಂತಿತ್ತು. ರವಿ ಅವರ ಸಾವು ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಿಸಿದೆ. ಮೃತರಿಗೆ ಪತ್ನಿ, ತಂದೆ, ತಾಯಿ, ಅಣ್ಣ, ಅತ್ತಿಗೆ ಇದ್ದಾರೆ. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.