ಹನಿಮೂನ್‌ಗೆ ಹಣ ಹೊಂದಿಸಲು ಮದುವೆ ಊಟ ಹರಾಜು ; ನವ ಜೋಡಿ ಕೃತ್ಯಕ್ಕೆ ತೀವ್ರ ಆಕ್ರೋಶ !

ವಾಷಿಂಗ್ಟನ್: ತಮ್ಮ ಹನಿಮೂನ್‌ಗೆ ಹಣ ಹೊಂದಿಸಲು ಮದುವೆ ಸಮಾರಂಭದಲ್ಲಿ ಊಟದ ತಟ್ಟೆಯೊಂದನ್ನು ಹರಾಜು ಹಾಕಿದ ನವದಂಪತಿ, ಅಂತರ್ಜಾಲದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಈ ಘಟನೆ ಸಾವಿರಾರು ಜನರ ಕೆಂಗಣ್ಣಿಗೆ ಗುರಿಯಾಗಿದ್ದು, ಮದುವೆಯ ಶಿಷ್ಟಾಚಾರ ಮತ್ತು ಅತಿಥಿಗಳನ್ನು ಸತ್ಕರಿಸುವ ಸರಿಯಾದ ವಿಧಾನದ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ.

ಏನಿದು ಘಟನೆ?

X (ಹಿಂದಿನ ಟ್ವಿಟರ್) ಖಾತೆಯಾದ (@turbothad) ಮೂಲಕ ಈ ಘಟನೆ ಬೆಳಕಿಗೆ ಬಂದಿದೆ. ಸಮಾರಂಭದ ನಂತರ ವಧು-ವರರು ತಮ್ಮ ಹಸಿದ ಅತಿಥಿಗಳನ್ನು ಕುಳ್ಳಿರಿಸಿ, “ಎಲ್ಲರಿಗೂ ಹಸಿವಾಗಿದೆ ಎಂದು ನಮಗೆ ಗೊತ್ತು… ಹಾಗಾಗಿ ಊಟದ ಮೊದಲ ತಟ್ಟೆಯನ್ನು ಹರಾಜು ಹಾಕುತ್ತಿದ್ದೇವೆ. ಯಾರು ಇದನ್ನು ಖರೀದಿಸುತ್ತಾರೋ, ಅವರ ಟೇಬಲ್‌ಗೆ ಮೊದಲು ಊಟ ಬಡಿಸಲಾಗುತ್ತದೆ. ಇದರ ಆದಾಯವನ್ನು ನಮ್ಮ ಅಲಸ್ಕಾ ಮೀನುಗಾರಿಕೆ ಪ್ರವಾಸದ ಹನಿಮೂನ್‌ಗೆ ಬಳಸಲಾಗುತ್ತದೆ” ಎಂದು ಘೋಷಿಸಿದ್ದಾರೆ.

ಈ ಅನಿರೀಕ್ಷಿತ ಪ್ರಕಟಣೆಯು ಅತಿಥಿಗಳಲ್ಲಿ ಆಶ್ಚರ್ಯ ಮೂಡಿಸಿದೆ. ಪರಿಶೀಲಿಸದಿದ್ದರೂ, ವರದಿಯ ಪ್ರಕಾರ, ಹಸಿದ ಅತಿಥಿಯೊಬ್ಬರು ಮೊದಲ ಊಟದ ತಟ್ಟೆಗಾಗಿ ಬರೋಬ್ಬರಿ $1,500 (ಸುಮಾರು 1.25 ಲಕ್ಷ ರೂ.) ತೆತ್ತಿದ್ದಾರೆ ಎನ್ನಲಾಗಿದೆ.

“ಜೀನಿಯಸ್” ಅಥವಾ “ನಿಂದನೀಯ”? ಅಂತರ್ಜಾಲದಲ್ಲಿ ವ್ಯಾಪಕ ಚರ್ಚೆ

ಈ ಘಟನೆಯ ಬಗ್ಗೆ X ನಲ್ಲಿ ಬರೆದ @turbothad, “ಭಾವನಾತ್ಮಕವಾಗಿರುವ, ಖಾಲಿ ಹೊಟ್ಟೆಯಲ್ಲಿ ಕುಳಿತಿರುವ ಮತ್ತು ನಿಮ್ಮನ್ನು ಪ್ರೀತಿಸುವ ಜನರ ಕೋಣೆಯಲ್ಲಿ ಮಾರಾಟ ಮಾಡುವುದು…… ಜೀನಿಯಸ್” ಎಂದು ದಂಪತಿಯನ್ನು ಹೊಗಳಿದ್ದಾರೆ.

ಆದರೆ, ಸಾಮಾಜಿಕ ಮಾಧ್ಯಮ ಬಳಕೆದಾರರು ದಂಪತಿಯ ಕಾರ್ಯವನ್ನು ತೀವ್ರವಾಗಿ ಟೀಕಿಸಿದ್ದಾರೆ. ಇದನ್ನು “ಅಸಭ್ಯ” ಎಂದು ಕರೆದಿದ್ದಾರೆ. “ಕೆಲವರಿಗೆ ಮದುವೆ ಎಂದರೆ ಕೇವಲ ಹಣ ಗಳಿಸುವ ವಿಧಾನವಾಗಿದೆ. ಈಗಾಗಲೇ ಹಣ ಪಾವತಿಸಿದ ಊಟವನ್ನು ನಿಮ್ಮ ಮದುವೆಯಲ್ಲಿ ಸ್ನೇಹಿತರು ಮತ್ತು ಕುಟುಂಬಕ್ಕೆ ಹರಾಜು ಹಾಕುವುದು ನಾಚಿಕೆಗೇಡಿನ ವರ್ತನೆ” ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇದು ಅಸಂಬದ್ಧ ವರ್ತನೆ. ನಿಮ್ಮ ಮದುವೆಗೆ ಬರಲು ಪ್ರತಿಯೊಬ್ಬರೂ ಸಾಕಷ್ಟು ಹಣ ಮತ್ತು ಸಮಯವನ್ನು ವ್ಯಯಿಸಿದ್ದಾರೆ. ಅವರಿಗೆ ಸಮಯಕ್ಕೆ ಸರಿಯಾಗಿ ಊಟ ಬಡಿಸಲು ಹೆಚ್ಚುವರಿ ಹಣ ಪಾವತಿಸುವಂತೆ ಮಾಡುವುದು ಭಯಾನಕವಾಗಿದೆ” ಎಂದು ಮತ್ತೊಬ್ಬರು ಟೀಕಿಸಿದ್ದಾರೆ.

ಅನೇಕರು ತಾವು ಆ ಮದುವೆಯಿಂದ ಹೊರನಡೆಯುತ್ತಿದ್ದೆವು ಎಂದು ಹೇಳಿಕೊಂಡಿದ್ದಾರೆ. “ನಾನು ಆ ಮದುವೆಯಿಂದ ಹೊರನಡೆದು, ಮನೆಗೆ ಹೋಗುವ ದಾರಿಯಲ್ಲಿ ಮೆಕ್‌ಡೊನಾಲ್ಡ್ಸ್‌ನಿಂದ ಏನಾದರೂ ತಿನ್ನುತ್ತಿದ್ದೆ” ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು “ನಾನು ನನ್ನ ಕಾರ್ಡ್ ಸಮೇತ ಹೊರನಡೆಯುತ್ತಿದ್ದೆ” ಎಂದು ಬರೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read