ಚಕ್ರ ಸಿಡಿದು ಮರಕ್ಕೆ ಢಿಕ್ಕಿ ಹೊಡೆದ ಕಾರು; ನವದಂಪತಿ ಸೇರಿ ನಾಲ್ವರು ಸಜೀವ ದಹನ

ಚಲಿಸುತ್ತಿದ್ದ ಕಾರೊಂದರ ಚಕ್ರ ಸಿಡಿದ ಪರಿಣಾಮ ಮರಕ್ಕೆ ಕಾರು ಢಿಕ್ಕಿ ಹೊಡೆದು ಅದಾಗ ತಾನೇ ಮದುವೆಯಾಗಿದ್ದ ದಂಪತಿ ಸೇರಿದಂತೆ ನಾಲ್ವರು ಸಜೀವ ದಹನಗೊಂಡ ದುರ್ಘಟನೆ ಮಧ್ಯ ಪ್ರದೇಶದ ಹರ್ದಾ ಜಿಲ್ಲೆಯಲ್ಲಿ ಬುಧವಾರ ಜರುಗಿದೆ.

ಬೆಳಿಗ್ಗೆ 7 ಗಂಟೆಯ ವೇಳೆಗೆ ಇಲ್ಲಿನ ನೌಸರ್‌ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಇಲ್ಲಿನ ದೀಪ್‌ಗಾಂವ್ ಎಂಬಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗಿಯಾದ ಬೆನ್ನಿಗೇ ತಮ್ಮ ಗ್ರಾಮ ವರ್ಕಲಾ ಎಂಬಲ್ಲಿಗೆ ಈ ಮಂದಿ ಧಾವಿಸುತ್ತಿದ್ದರು ಎಂದು ಸ್ಥಳೀಯ ತಿಮಾರ್ನಿ ಪೊಲೀಸ್ ಠಾಣಾ ಇನ್‌-ಚಾರ್ಜ್ ಸುಶೀಲ್ ಪಟೇಲ್ ತಿಳಿಸಿದ್ದಾರೆ.

ಪ್ರಯಾಣದ ವೇಳೆ ಕಾರಿನ ಚಕ್ರ ದಿಢೀರನೇ ಸಿಡಿದ ಪರಿಣಾಮ ಕಾರು ಮರಕ್ಕೆ ಗುದ್ದಿದೆ. ಇದರ ಬೆನ್ನಿಗೇ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯು ಕಾರಿನೊಳಗೆ ದಟ್ಟವಾಗಿ ಆವರಿಸಿದ ಪರಿಣಾಮ ಒಳಗಿದ್ದ ಪ್ರಯಾಣಿಕರು ಅಲ್ಲಿಯೇ ಸುಟ್ಟುಹೋಗಿದ್ದಾರೆ.

ಅಫಘಾತದಲ್ಲಿ ಮೃತಪಟ್ಟ ದಂಪತಿ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಮೃತರನ್ನು ಅಖಿಲೇಶ್ ಖುಶ್ವಾಹಾ, ರಕ್ಷ್ ಖೂಶ್ವಾಹಾ, ಶಿವಾನಿ ಖುಶ್ವಾಹಾ ಮತ್ತು ಆದರ್ಶ್ ಚೌಧರಿ ಎಂದು ಗುರುತಿಸಲಾಗಿದ್ದು, ಇವರ ವಯಸ್ಸಿನ ವಿವರಗಳು ಸಿಕ್ಕಿಲ್ಲ.

ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read