ಮದುವೆಯಾದ ಮೂರೇ ದಿನಕ್ಕೆ ಹೆಣವಾಗಿ ಪತ್ತೆಯಾದ ನವದಂಪತಿ: ಆರತಕ್ಷತೆಗೂ ಮುನ್ನ ಘೋರ ದುರಂತ

ಛತ್ತೀಸ್ಗಡದ ರಾಜಧಾನಿ ರಾಯಪುರದಲ್ಲಿ ಮಂಗಳವಾರ ಸಂಜೆ ಘೋರ ದುರಂತವೊಂದು ನಡೆದಿದೆ. ಮೂರು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವದಂಪತಿ ಆರತಕ್ಷತೆ ಕಾರ್ಯಕ್ರಮಕ್ಕೂ ಮುನ್ನ ಶವವಾಗಿ ಪತ್ತೆಯಾಗಿದ್ದು, ಅವರುಗಳ ದೇಹದ ಮೇಲೆ ಚಾಕುವಿನಿಂದ ಇರಿದ ಗಾಯ ಆಗಿದೆ.

ರಾಯ್ಪುರದಲ್ಲಿನ ಟಿಕಾರಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಬ್ರಿಜ್ ನಗರದಲ್ಲಿ ಈ ಘಟನೆ ನಡೆದಿದ್ದು, ಫೆಬ್ರವರಿ 19ರಂದು ವಿವಾಹವಾಗಿದ್ದ 24 ವರ್ಷದ ಅಸ್ಲಾಂ ಹಾಗೂ 22 ವರ್ಷದ ಕಾಕಶಾ ಭಾನು ಹತ್ಯೆಯಾಗಿದ್ದಾರೆ. ಮಂಗಳವಾರದಂದು ಇವರುಗಳ ಆರತಕ್ಷತೆ ಕಾರ್ಯಕ್ರಮ ನಡೆಯಬೇಕಿತ್ತು ಎಂದು ಹೇಳಲಾಗಿದೆ.

ಇದಕ್ಕಾಗಿ ನವದಂಪತಿ ತಮ್ಮ ಕೋಣೆಯಲ್ಲಿ ಸಿದ್ಧತೆ ನಡೆಸುತ್ತಿದ್ದು ಈ ಸಂದರ್ಭದಲ್ಲಿ ವಧುವಿನ ಚಿತ್ಕಾರ ಕೇಳಿ ಬಂದಿದೆ. ವರನ ತಾಯಿ ಕೂಡಲೇ ಕೋಣೆಗೆ ಧಾವಿಸಿದ್ದು ಒಳಗಿನಿಂದ ಚಿಲಕ ಹಾಕಲಾಗಿತ್ತು. ಬಳಿಕ ಬಾಗಿಲನ್ನು ಒಡೆದು ಒಳ ಪ್ರವೇಶಿಸಿದಾಗ ರಕ್ತದ ಮಡುವಿನಲ್ಲಿ ಇಬ್ಬರ ಮೃತ ದೇಹ ಬಿದ್ದಿತ್ತು. ಅಸ್ಲಾಂ ಮೊದಲಿಗೆ ತನ್ನ ಪತ್ನಿಗೆ ಚಾಕು ಇರಿದು ಬಳಿಕ ತಾನೂ ಇರಿದುಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read