ಮೊದಲ ರಾತ್ರಿಯೇ ನವದಂಪತಿ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ರಹಸ್ಯ

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನವ ವಿವಾಹಿತ ದಂಪತಿ ತಮ್ಮ ಮದುವೆಯ ಮರುದಿನ ಶವವಾಗಿ ಪತ್ತೆಯಾಗಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವಧು-ವರರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ ನಂತರ ಅವರ ಸಾವಿನ ಕಾರಣ ಬಯಲಾಗಿದೆ.

22 ವರ್ಷದ ಪ್ರತಾಪ್ ಯಾದವ್ ಮೇ 30 ರಂದು 20 ವರ್ಷದ ಪುಷ್ಪಾ ಅವರನ್ನು ವಿವಾಹವಾದರು. ಪತಿ ಮತ್ತು ಪತ್ನಿ ಇಬ್ಬರೂ ಮದುವೆಯ ನಂತರ ಮೊದಲ ರಾತ್ರಿಗೆಂದು ಅವರ ಕೋಣೆಗೆ ಹೋದರು. ಆದರೆ ಮರುದಿನ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದರು.

ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಪತಿ-ಪತ್ನಿ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಎಸ್ಪಿ ಪ್ರಶಾಂತ್ ವರ್ಮಾ ತಿಳಿಸಿದ್ದಾರೆ.

ನವದಂಪತಿಗಳಾದ ಪ್ರತಾಪ್ ಮತ್ತು ಪುಷ್ಪಾ ಅವರ ಅಂತ್ಯಕ್ರಿಯೆಯನ್ನು ಪ್ರತಾಪ್ ಅವರ ಗ್ರಾಮದಲ್ಲಿ ಅಪಾರ ಜನಸ್ತೋಮದ ನಡುವೆ ಒಂದೇ ಚಿತಾಗಾರದಲ್ಲಿ ನೆರವೇರಿಸಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read