ಜನವರಿ 5 ಕ್ಕೆ ತೆರೆ ಕಾಣಲಿದೆ ಹೊಸಬರ ‘ಒಂಟಿ ಬಂಟಿ ಲವ್ ಸ್ಟೋರಿ’ ಸಿನಿಮಾ

ಯತೀಶ್ ಪನ್ನ ಸಮುದ್ರ ನಿರ್ದೇಶನದ ‘ಒಂಟಿ ಬಂಟಿ ಲವ್ ಸ್ಟೋರಿ’ ಇದೇ ಜನವರಿ 5ರಂದು ರಾಜ್ಯದಾದ್ಯಂತ ತೆರೆ ಮೇಲೆ ಬರಲಿದೆ. ಹೊಸ ಕಲಾವಿದರನ್ನೊಳಗೊಂಡ ಈ ಸಿನಿಮಾದಲ್ಲಿ ಶ್ವೇತಾ ಭಟ್, ವೈಭವ್ ವರ್ಧನ್, ರಾಜು ಶೃಂಗೇರಿ, ಶೃತಿ ಚಂದ್ರಶೇಖರ್, ಪರಶುರಾಮ್ ಗುಡ್ಡಳ್ಳಿ, ಪೂಜಾ ಲತಾ, ಮಂಜುನಾಥ್ ಸೇರಿದಂತೆ ನಿರ್ದೇಶಕ ಯತೀಶ್ ಪನ್ನಸಮುದ್ರ ತೆರೆ  ಹಂಚಿಕೊಂಡಿದ್ದಾರೆ.

ರೋಮ್ಯಾಂಟಿಕ್ ಕಾಮಿಡಿ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ನಿರ್ದೇಶಕ ಯತೀಶ್ ಪನ್ನಸಮುದ್ರ ಅವರೇ ನಿರ್ಮಾಣ ಮಾಡಿದ್ದು, ಶ್ರೀಹರಿ ಸಂಗೀತ ಸಂಯೋಜನೆ ನೀಡಿದ್ದಾರೆ. ಅಭಿನವ್ ಶ್ರೀನಿವಾಸ್ ಸಂಕಲನವಿದ್ದು, ಶಿವರಾಜ್ ರಾಥೋಡ್  ಛಾಯಾಗ್ರಹಣವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read