ಬೆಂಗಳೂರು: ಐದು ದಿನಗಳ ಹಸುಗೂಸನ್ನು ಲೇಔಟ್ ಒಂದರ ಗಿಡಗಂಟಿಗಳಲ್ಲಿ ಎಸೆದು ಹೋಗಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ದಬಳ್ಳಪೌರದಲ್ಲಿ ನಡೆದಿದೆ.
ಇಲ್ಲಿನ ತಿರುಮಗೊಂಡನಹಳ್ಳಿ ಲೇಔಟ್ ನಲ್ಲಿ ಗಿಡಗಂಟಿಗಳ ನಡುವೆ ಮಗು ಅಳುವುದನ್ನು ಕೇಳಿ ಸ್ಥಳಕ್ಕೆ ಬಂದು ಪರಿಶೀಲಿಸಿದ ಸ್ಥಳೀಯರಿಗೆ ಪೊದೆಯಲ್ಲಿ ಗಂಡುಮಗುವೊಂದು ಪತ್ತೆಯಾಗಿದೆ. ಮಗುವಿನ ತಂದೆ-ತಾಯಿ ಹೆತ್ತ ಮಗುವನ್ನೇ ಬಿಟ್ಟು ಹೋಗಿದ್ದಾರೆ.
ಐದು ದಿನಗಳ ಗಂಡು ಮಗು ಇದಾಗಿದ್ದು, ಸ್ಥಳೀಯರು ಮಗುವನ್ನು ರಕ್ಷಿಸಿ ಹಾಲುಣಿಸಿ ಆರೈಕೆ ಮಾಡಿದ್ದಾರೆ.
