ಹೊಸ ವರ್ಷಕ್ಕೆ ಮದ್ಯಪ್ರಿಯರಿಗೆ ಸಿಹಿ ಸುದ್ದಿ: ಮೂರು ಬಾಟಲ್ ಮದ್ಯ ಖರೀದಿಸಿದರೆ ಒಂದು ಉಚಿತ

ಬೆಂಗಳೂರು: ಹೊಸ ವರ್ಷವನ್ನು ಸ್ವಾಗತಿಸುವ ನಿಟ್ಟಿನಲ್ಲಿ ಬೆಂಗಳೂರಿನ ಬಾರ್ ಅಂಡ್ ರೆಸ್ಟೋರೆಂಟ್ ಗಳು, ಪಬ್, ವೈನ್ ಸ್ಟೋರ್ ಗಳಲ್ಲಿ ಮದ್ಯಪ್ರಿಯರಿಗೆ ಆಫರ್ ನೀಡುವ ಮೂಲಕ ಮಾರಾಟ ಹೆಚ್ಚಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿವೆ.

ಹೊಸ ವರ್ಷ ಹಿನ್ನೆಲೆಯಲ್ಲಿ ಡಿಸೆಂಬರ್ 31 ರಂದು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗುತ್ತದೆ. ಇದೇ ಸಂದರ್ಭದಲ್ಲಿ ವ್ಯಾಪಾರ, ಗ್ರಾಹಕರ ಹೆಚ್ಚಳದ ಜೊತೆಗೆ ಗ್ರಾಹಕರನ್ನು ಸಂಪಾದಿಸಲು ದುಬಾರಿ ಬೆಲೆಯ ಮದ್ಯಗಳಲ್ಲಿ ರಿಯಾಯಿತಿ ಹೆಚ್ಚಿನ ಖರೀದಿಗೆ ಒಂದು ಬಾಟಲ್ ಉಚಿತ ನೀಡುವುದಾಗಿ ಕೆಲವು ಮದ್ಯ ಮಾರಾಟಗಾರರು ಪ್ರಕಟಿಸಿದ್ದಾರೆ.

ಕೆಲವು ಬ್ರಾಂಡ್ ನವರು ಮಾರಾಟ ಹೆಚ್ಚಳಕ್ಕೆ ಮದ್ಯದ ಅಂಗಡಿಯವರಿಗೆ ದುಬಾರಿ ಬೆಲೆಯ 750 ಎಂಎಲ್ ನ ಫುಲ್ ಬಾಟಲ್ ಮೇಲೆ 100-ರಿಂದ 200 ರೂಪಾಯಿವರೆಗೂ ಕಂಪನಿಗಳು ತಮಗೆ ನೀಡಿದ ದರ ರಿಯಾಯಿತಿ ಕೊಡುಗೆಯನ್ನು ಗ್ರಾಹಕರಿಗೆ ನೀಡಿ ವ್ಯಾಪಾರ ಹೆಚ್ಚಿಸಿಕೊಳ್ಳಲು ಮದ್ಯ ಮಾರಾಟಗಾರರು ಮುಂದಾಗಿದ್ದು, ಮೂರು ಬಾಟಲ್ ಖರೀದಿಸಿದರೆ ಒಂದು ಬಾಟಲ್ ಉಚಿತವಾಗಿ ನೀಡುವುದಾಗಿ ಕೆಲವು ಘೋಷಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read