BIG NEWS: ಹೊಸ ವರ್ಷಸದ ಸಂಭ್ರಮ; ಬೀದಿ ಬೀದಿಗಳಲ್ಲಿಯೂ ಕಸದ ರಾಶಿ; ಒಂದೇ ರಾತ್ರಿ ಬರೋಬ್ಬರಿ 8 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹ

ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾ ನಗರ, ಕೋರಮಂಗಲದ ರಸ್ತೆಗಳು ಜನಜಂಗುಳಿಯಿಂದ ತುಂಬಿದ್ದು, ರಾಶಿ ರಾಶಿ ಕಸಗಳು ರಸ್ತೆ ತುಂಬೆಲ್ಲಾ ಬಿದ್ದಿದ್ದವು.

ವರ್ಷಾಚರಣೆ ಸಂಭ್ರಮಿಸುವ ಬರದಲ್ಲಿ ರಸ್ತೆ ರಸ್ತೆಗಳಲ್ಲಿಯೂ ಕಸ ಎಸೆಯಲಾಗಿತ್ತು. ಬಿಬಿಎಂಪಿ ಪೌರ ಕಾರ್ಮಿಕರು ಮುಂಜಾನೆಯಿಂದಲೇ ಕಸ ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದು, ಡಿಸೆಬರ್ 31ರ ಒಂದೇ ರಾತ್ರಿಯಲ್ಲಿ ನಗರದಲ್ಲಿ ಬರೋಬ್ಬರಿ 8 ಮೆಟ್ರಿಕ್ ಟನ್ ಕಸ ಸಂಗ್ರಹವಾಗಿದೆ.

ನಸುಕಿನ ಜಾವ 3ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ಬಿಬಿಎಂಪಿ ಪೌರಕಾರ್ಮಿಕರು ನಗರದ ಬೀದಿಗಳನ್ನು ಗುಡಿಸಿ ಸ್ವಚ್ಛಗೊಳಿಸಿದ್ದು, ಸ್ವಚ್ಚತೆಗೆ 2 ಕಾಂಪ್ಯಾಕ್ಟರ್, 25 ಆಟೋ ಟಿಪ್ಪರ್ ಬಳಕೆ ಮಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read