BIG NEWS: ಹೊಸ ವರ್ಷಾಚಾರಣೆ: ರಾಜ್ಯದ್ಯಂತ ತುರ್ತು ಸ್ಪಂದನೆಗೆ ಆರೋಗ್ಯ ಕವಚ 108 ಆಂಬುಲೆನ್ಸ್ ವ್ಯವಸ್ಥೆ

ಬೆಂಗಳೂರು: ಹೊಸ ವರ್ಷಾಚಾರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಪ್ರಾಣಹಾನಿ ತಡೆಯುವ ನಿಟ್ಟಿನಲ್ಲಿ ಡಿ. 31ರಂದು ರಾತ್ರಿಯಿಡಿ 108 ತುರ್ತು ಅರೋಗ್ಯ ಕವಚ ಆಂಬುಲೆನ್ಸ್ ಕರ್ನಾಟಕ ರಾಜ್ಯದ್ಯಂತ ಸನ್ನದ್ದವಾಗಲಿದೆ.

ಸಾಮಾನ್ಯ ದಿನಗಳಿಗಿಂತ ಹೊಸ ವರ್ಷದ ಆಚರಣೆ ಸಂದರ್ಭಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

108 ಆಂಬುಲೆನ್ಸ್ ಸೇವೆಯು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಹಕಾರವನ್ನು ಹೊಂದಿರುತ್ತದೆ. ಹೆಚ್ಚಿನ ತುರ್ತು ಸಂಧರ್ಭಗಳು ಸಂಭವಿಸಬಹುದಾದ ಪ್ರದೇಶಗಳಲ್ಲಿ ಹೆಚ್ಚುವರಿ ಆಂಬುಲೆನ್ಸ್ ಅನ್ನು ನಿಯೋಜಿಸಲಾಗುವುದು. ಹೆಚ್ಚುವರಿ ಸೇವೆಗಾಗಿ ಆಂಬುಲೆನ್ಸ್ ಸಿಬ್ಬಂದಿಯ ವಾರದ ರಜೆಯನ್ನು ಕೂಡ ರದ್ದುಗೊಳಿಸಲಾಗಿದೆ. ಮುಂಜಾಗ್ರತವಾಗಿ ಎಲ್ಲಾ ಆಂಬುಲೆನ್ಸ್ ನಲ್ಲಿ ಇಂಧನ, ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ಸಜ್ಜುಗೊಳಿಸಲಾಗಿದೆ.

ಈಗಾಗಲೇ ಬೆಳಗಾವಿಯಲ್ಲಿ 56 ಆಂಬುಲೆನ್ಸ್ ಗಳನ್ನು ಸಿಬ್ಬಂದಿಗಳೊಂದಿಗೆ ನಿಯೋಜಿಸಲಾಗಿದೆ. ತುರ್ತುಪರಿಸ್ಥಿತಿಗಳಲ್ಲಿ 108 ಪ್ರೀ ಸಂಖ್ಯೆ ಡಯಲ್ ಮಾಡಬಹುದು ಎಂದು ಬೆಳಗಾವಿ EMRI ಜಿಲ್ಲಾ ವ್ಯವಸ್ತಾಪಕ ಹರ್ಷ ನಾಯಕ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read