ಬಹು ನಿರೀಕ್ಷಿತ ಟ್ರಯಂಫ್‌ ಬೈಕ್‌ ರಿಲೀಸ್; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಟ್ರಯಂಫ್ ಸ್ಟ್ರೀಟ್ ಟ್ರಿಪಲ್ 765 ಆರ್‌ ಮತ್ತು ಆರ್‌ಎಸ್‌ನ ಅಧಿಕೃತ ಬಿಡುಗಡೆಗಾಗಿ ಕಾಯುತ್ತಿರುವವರಿಗೆ ಇಲ್ಲಿದೆ ಗುಡ್‌ ನ್ಯೂಸ್‌. ಈ ಬೈಕ್‌ಗಳು ಅಂತಿಮವಾಗಿ ಪದಾರ್ಪಣೆ ಮಾಡಿವೆ. ಹೊಸ ಸ್ಟ್ರೀಟ್ ಟ್ರಿಪಲ್ ಆರ್‌ ಈಗ 10,17,000 ರೂಪಾಯಿಗೆ ಲಭ್ಯವಿದ್ದರೆ, ಸ್ಟ್ರೀಟ್ ಟ್ರಿಪಲ್ ಆರ್‌ಎಸ್‌ ಬೆಲೆ 11,81,000 (ಎಕ್ಸ್ ಶೋ ರೂಂ ಇಂಡಿಯಾ).

ಹೊಸ ಸ್ಟ್ರೀಟ್ ಟ್ರಿಪಲ್ಸ್ 765ನಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಬಾಡಿವರ್ಕ್ ಮತ್ತು ಸ್ಪೋರ್ಟಿಯರ್ ಲುಕಿಂಗ್ ಹೆಡ್‌ಲೈಟ್‌ಗಳಲ್ಲಿ ಚಿಕ್ಕ ಬದಲಾವಣೆ ಇವೆ. ರೇಕ್ ಕೋನವನ್ನು ಸಹ ತೀಕ್ಷ್ಣಗೊಳಿಸಲಾಗಿದೆ.

ಈ ಎರಡೂ ಮೋಟಾರ್ ‌ಸೈಕಲ್‌ಗಳನ್ನು ಮೊದಲಿಗಿಂತ ಹೆಚ್ಚು ಉತ್ತೇಜಕವಾಗಿಸುವುದು ಕಂಪೆನಿಯ ಉದ್ದೇಶವಾಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ಷಮತೆಯ ಪ್ಯಾಕೇಜ್ ಅನ್ನು ಅದು ನೀಡಿದೆ.

ಹೊಸ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ 765 R ಮತ್ತು RS ಮೊದಲಿಗಿಂತ ಹೆಚ್ಚು ಮೈಲೇಜ್‌ ನೀಡುತ್ತಿವೆ. ಅತ್ಯಂತ ಆಸಕ್ತಿದಾಯಕ ಸಂಗತಿಯೆಂದರೆ, 765 R ಮತ್ತು RS ನಡುವಿನ ಬೆಲೆ ವ್ಯತ್ಯಾಸವು ಈಗ ಸರಿಸುಮಾರು ಕೇವಲ 1 ಲಕ್ಷ ರೂ. ಆಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read