ಬಿಡುಗಡೆಯಾಗಿದೆ ಹೊಸ ಟಾಟಾ ಹ್ಯಾರಿಯರ್; ಇಲ್ಲಿದೆ ಬೆಲೆ ಮತ್ತು ವೈಶಿಷ್ಟ್ಯತೆಗಳ ಸಂಪೂರ್ಣ ವಿವರ

ವಾಹನ ಪ್ರಿಯರು ಕಾತರದಿಂದ ಕಾಯುತ್ತಿದ್ದ ಹೊಸ 2023 ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಇದು ನಾಲ್ಕು ಟ್ರಿಮ್ ಹಂತಗಳಲ್ಲಿ ಲಭ್ಯವಿದೆ – ಸ್ಮಾರ್ಟ್, ಪ್ಯೂರ್‌, ಅಡ್ವೆಂಚರ್‌ ಮತ್ತು ಫಿಯರ್‌ಲೆಸ್‌.

ಹೊಸ ಹ್ಯಾರಿಯರ್ ಬೆಲೆ 15.49 ಲಕ್ಷದಿಂದ ಪ್ರಾರಂಭವಾಗಿ, 24.49 ಲಕ್ಷ ರೂಪಾಯಿವರೆಗಿದೆ. ಸ್ವಯಂಚಾಲಿತ ರೂಪಾಂತರ ಮತ್ತು ಡಾರ್ಕ್ ಆವೃತ್ತಿಯ ಬೆಲೆ 19.99 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದು ಹ್ಯಾರಿಯರ್ ಜೀಪ್ ಕಂಪಾಸ್ ಮತ್ತು ಎಂಜಿ ಹೆಕ್ಟರ್‌ನಂತಹ ಎಸ್‌ಯುವಿಗಳೊಂದಿಗೆ ಸ್ಪರ್ಧಿಸುತ್ತದೆ.

ಹೊಸ ರೂಪಾಂತರಗಳ ಬೆಲೆ

– Smart MT: 15.49 ಲಕ್ಷ ರೂಪಾಯಿ

– Pure MT: 16.99 ಲಕ್ಷ ರೂಪಾಯಿ

– Pure+ MT (Sunroof): 18.69 ಲಕ್ಷ ರೂಪಾಯಿ

– Adventure MT: 20.19 ಲಕ್ಷ ರೂಪಾಯಿ

– Adventure+ MT (ADAS): 21.69 ಲಕ್ಷ ರೂಪಾಯಿ

– Fearless MT: 22.99 ಲಕ್ಷ ರೂಪಾಯಿ

– Fearless+ MT: 24.49 ಲಕ್ಷ ರೂಪಾಯಿ

ಎಂಜಿನ್ ವಿಶೇಷತೆ

ಈ ಕಾರಿನ ಎಲ್ಲಾ ರೂಪಾಂತರಗಳು 2.0L ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತವೆ. ಇದನ್ನು ಹಿಂದಿನ ಫೇಸ್‌ಲಿಫ್ಟ್ ಆವೃತ್ತಿಯಿಂದ ತೆಗೆದುಕೊಳ್ಳಲಾಗಿದೆ. ಇದು 170PS ಪವರ್ ಮತ್ತು 350Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಖರೀದಿದಾರರಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಪ್ಯಾಡಲ್ ಶಿಫ್ಟರ್‌ಗಳು ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸಹ ಸ್ವಯಂಚಾಲಿತ ರೂಪಾಂತರದಲ್ಲಿ ಲಭ್ಯವಿದೆ. ನವೀಕರಿಸಿದ ಹ್ಯಾರಿಯರ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಕ್ರಮವಾಗಿ 16.08 ಕಿಮೀ ಮತ್ತು 14.60 ಕಿಮೀ  ಮೈಲೇಜ್ ನೀಡಬಹುದು.

ಇತರ ಫೀಚರ್ಸ್‌

ಹೊಸ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್‌ನ ಹೊರಭಾಗ ಮತ್ತು ಒಳಭಾಗ ಎರಡರಲ್ಲೂ ಪ್ರಮುಖ ಬದಲಾವಣೆಗಳನ್ನು ಕಾಣಬಹುದು. ಇದು ಇತ್ತೀಚಿನ ಸ್ಮಾರ್ಟ್‌ಫೋನ್ ಕನೆಕ್ಷನ್‌ ಆಯ್ಕೆಯನ್ನು ಹೊಂದಿದೆ. ದೊಡ್ಡ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದರಲ್ಲಿದೆ. ಇದರೊಂದಿಗೆ 10.25 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್ ಕೂಡ ಇದೆ. ಇದು 4-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಬ್ಯಾಕ್‌ಲಿಟ್ ಟಾಟಾ ಲೋಗೋ ಇದರಲ್ಲಿದೆ. ಇದಲ್ಲದೆ  ಡ್ಯಾಶ್‌ಬೋರ್ಡ್‌ಗೆ ಲೆಥೆರೆಟ್ ಪ್ಯಾಡಿಂಗ್ ಮತ್ತು ಹೊಳಪು ನೀಡಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read