ಅಪರೂಪದ ಘಟನೆ: ಒಂದು ಗಂಟೆ ಅವಧಿಯಲ್ಲಿ ಅವಳಿಗಳ ಜನನ : ಆದರೆ ಇಬ್ಬರು ಜನಿಸಿದ ವರ್ಷವೇ ಬೇರೆ ಬೇರೆ….!

ನ್ಯೂಜೆರ್ಸಿಯ ದಂಪತಿ ತಮ್ಮ ಅವಳಿ ಮಕ್ಕಳನ್ನು ಬೇರೆ ಬೇರೆ ದಿನವಷ್ಟೇ ಅಲ್ಲ ಬೇರೆ ಬೇರೆ ವರ್ಷದಂದು ಸ್ವಾಗತಿಸಿದ್ದಾರೆ. ತುಂಬಾ ಅಪರೂಪವೆನಿಸುವ ಇಂತಹ ಪ್ರಕರಣಗಳಲ್ಲಿ 36 ವರ್ಷದ ಬಿಲ್ಲಿ ಹಂಫ್ರಿ, 34 ವರ್ಷದ ಈವ್ ಹಂಫ್ರೆ ತಮ್ಮ ಅವಳಿ ಮಕ್ಕಳನ್ನು ಬೇರೆ ಬೇರೆ ವರ್ಷದಲ್ಲಿ ಸ್ವಾಗತಿಸಿದ್ದಾರೆ.

ವಿಶೇಷವೆಂದರೆ ಬಿಲ್ಲಿ ಹಂಫ್ರಿ ಜನ್ಮದಿನಂದಂದೇ ಅವಳಿ ಜವಳಿಯ ಮೊದಲ ಮಗುವಿನ ಜನನವಾಗಿದೆ. ಬಿಲ್ಲಿ ಹಂಫ್ರಿ ಡಿಸೆಂಬರ್ 31 ರಂದು 36ವರ್ಷ ಪೂರೈಸಿದರು. ಅಂದು ರಾತ್ರಿ 11.48 ಕ್ಕೆ ಮೊದಲ ಮಗು ಎಜ್ರಾ ಹಂಫ್ರೆ ಈ ಜಗತ್ತನ್ನ ಪ್ರವೇಶಿಸಿದ್ರೆ, ಒಂದು ಗಂಟೆ ಬಳಿಕ ಎರಡನೇ ಮಗು ಎಝೆಕಿಯೆಲ್ ಜನವರಿ 1 ರ ಮಧ್ಯರಾತ್ರಿ 12.28 ಕ್ಕೆ ಜನಿಸಿತು.

ತನ್ನ ಜನ್ಮದಿನದಂದು ಓರ್ವ ಪುತ್ರ ಜನಿಸಿದ ಸಂಭ್ರಮವನ್ನು ಬಿಲ್ಲಿ ಹಂಫ್ರಿ ಹಂಚಿಕೊಂಡು ಸಂತಸಪಟ್ಟಿದ್ದಾರೆ. ತಾಯಿ ಈವ್ ಹಂಫ್ರೆಗೆ ಡಿಸೆಂಬರ್ 30ರಂದು ಹೆರಿಗೆ ನೋವು ಕಾಣಿಸಿಕೊಂಡಿದ್ದು ಮುಂಚಿತವಾಗಿ ಗಂಡನಿಗೆ ಹುಟ್ಟುಹಬ್ಬದ ಶುಭ ಕೋರಿದ ಆಕೆ, ನಾನು ಇದೀಗ ಆಸ್ಪತ್ರೆಗೆ ದಾಖಲಾಗಬೇಕಿದೆ ಎಂದಿದ್ದರು.

ಮೊದಲ ಮಗು ಜನಿಸಿದ ಒಂದು ಗಂಟೆಯೊಳಗೆ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದು, ತಮ್ಮ ಅವಳಿ ಮಕ್ಕಳು ಬೇರೆ ಬೇರೆ ವರ್ಷದಂದು ಜನಿಸಿರುವ ವಿಷಯವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಲ್ಲಿ ಹಂಫ್ರಿ ” ಇದು ತುಂಬಾ ವಿಶೇಷವಾದದ್ದು, ಅವರು ಒಂದೇ ವರ್ಷದಲ್ಲಿ ಜನಿಸುವುದನ್ನು ಹಂಚಿಕೊಳ್ಳಲು ಸಹ ಸಾಧ್ಯವಾಗಲಿಲ್ಲ” ಎಂದು ತಮಾಷೆ ಮಾಡುತ್ತಾ ಹೇಳಿದ್ದಾರೆ.

New Jersey Twins Born in Different Years Less Than an Hour Apart

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read