ನವದೆಹಲಿ: ಹೊಸ ಐ-ಟಿ ಮಸೂದೆಯು ಯಾವುದೇ ತೆರಿಗೆ ದರವನ್ನು ಬದಲಾಯಿಸಲು ಪ್ರಯತ್ನಿಸುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಮಂಗಳವಾರ ತಿಳಿಸಿದೆ.
ಹೊಸ ಆದಾಯ ತೆರಿಗೆ ಮಸೂದೆ- 2025, ದೀರ್ಘಾವಧಿಯ ಬಂಡವಾಳ ಲಾಭಗಳ(LTCG) ಮೇಲಿನ ತೆರಿಗೆ ದರಗಳನ್ನು ಬದಲಾಯಿಸಲು ಪ್ರಸ್ತಾಪಿಸುತ್ತದೆ ಎಂಬ ವರದಿಗಳ ಕುರಿತು ಸ್ಪಷ್ಟಪಡಿಸಿದ ಐ-ಟಿ ಇಲಾಖೆ, ಇದು (ಮಸೂದೆ) ಯಾವುದೇ ತೆರಿಗೆ ದರಗಳನ್ನು ಬದಲಾಯಿಸಲು ಪ್ರಯತ್ನಿಸುವುದಿಲ್ಲ ಎಂದು ಹೇಳಿದೆ.
ಈ ವಿಷಯದಲ್ಲಿ ಯಾವುದೇ ಅಸ್ಪಷ್ಟತೆಯನ್ನು ಮಸೂದೆ ಅಂಗೀಕಾರದ ಸಮಯದಲ್ಲಿ ಸರಿಯಾಗಿ ಪರಿಹರಿಸಬೇಕು ಎಂದು ಹೇಳಿದೆ. ಆದಾಯ ತೆರಿಗೆ ಮಸೂದೆ, 2025 ಭಾಷಾ ಸರಳೀಕರಣ ಮತ್ತು ಅನಗತ್ಯ/ಬಳಕೆಯಲ್ಲಿಲ್ಲದ ನಿಬಂಧನೆಗಳನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಇಲಾಖೆ ಪೋಸ್ಟ್‌ನಲ್ಲಿ ತಿಳಿಸಿದೆ.
ಹೊಸ ಆದಾಯ ತೆರಿಗೆ ಮಸೂದೆ- 2025 ಅನ್ನು ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಪರಿಚಯಿಸಲಾಯಿತು ಮತ್ತು ನಂತರ ಸಂಸದೀಯ ಸಮಿತಿಗೆ ಉಲ್ಲೇಖಿಸಲಾಯಿತು. ಸಮಿತಿಯು ಮಸೂದೆಯ ಕುರಿತು ತನ್ನ ಶಿಫಾರಸನ್ನು ಜುಲೈ 21 ರಂದು ಸಂಸತ್ತಿಗೆ ಸಲ್ಲಿಸಿತು.
Income Tax department tweets, "There are news articles circulating on various media platforms that the new Income Tax Bill, 2025 proposes to change tax rates on LTCG for certain categories of taxpayers. It is clarified that the Income Tax Bill, 2025 aims at language… pic.twitter.com/vJgF0pVtXc
— ANI (@ANI) July 29, 2025