ವಾಹನ ಸವಾರರಿಗೆ ಮತ್ತೆ ಶಾಕ್: ಇಂದು ಮಧ್ಯರಾತ್ರಿಯಿಂದಲೇ ಟೋಲ್ ಶುಲ್ಕ ಹೆಚ್ಚಳ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ -ದೇವಿಹಳ್ಳಿ ಎಕ್ಸ್ಪ್ರೆಸ್ ಹೈವೇ ಲ್ಯಾಂಕೋ ಟೋಲ್ ಶುಲ್ಕವನ್ನು ಇಂದು ಮಧ್ಯರಾತ್ರಿಯಿಂದಲೇ ಅನ್ವಯವಾಗುವಂತೆ ಹೆಚ್ಚಳ ಮಾಡಲಾಗಿದೆ.

ನೆಲಮಂಗಲದಿಂದ ಹಾಸನ ಕಡೆಗೆ ತೆರಳುವ ವಾಹನ ಸವಾರರಿಗೆ ಶುಲ್ಕ ಹೆಚ್ಚಳದ ಬರೆ ಬಿದ್ದಿದೆ. ಇನ್ನು ನೆಲಮಂಗಲ- ಹಾಸನ ರಸ್ತೆಯಲ್ಲಿ ಪ್ರಯಾಣಿಸುವವರು ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ.

ಕಾರ್, ವ್ಯಾನ್, ಜೀಪ್, LMV ವಾಹನಗಳಿಗೆ ಟೋಲ್ ಶುಲ್ಕ 50 ರಿಂದ 55 ರೂ.ಗೆ ಹೆಚ್ಚಳ ಮಾಡಲಾಗಿದೆ. ಒಂದು ದಿನದಲ್ಲಿ ಅನೇಕ ಪ್ರಯಾಣಕ್ಕಾಗಿ 85 ರೂ. ಶುಲ್ಕ ಪಾವತಿಸಬೇಕಿದೆ.

ಲಘು ವಾಣಿಜ್ಯ ವಾಹನ LCV ಟೋಲ್ ಶುಲ್ಕ 90 ರೂ. ನಿಂದ 100 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಬಸ್, ಟ್ರಕ್ ವಾಹನಗಳ ಟೋಲ್‌ ಶುಲ್ಕ 185 ರೂ.ನಿಂದ 200 ರೂ.ಗೆ ಏರಿಕೆ ಮಾಡಲಾಗಿದೆ.

ಮಲ್ಟಿ ಆಕ್ಸೆಲ್ ವೆಹಿಕಲ್, ಬೃಹತ್ ನಿರ್ಮಾಣ ಯಂತ್ರೋಪಕರಣಗಳ ಶುಲ್ಕವನ್ನು 320 ರೂ.ಗೆ ಹೆಚ್ಚಳ ಮಾಡಲಾಗಿದೆ.

ಸ್ಥಳೀಯ ಸಂಚಾರ ವಾಹನಗಳು, ಶಾಲಾ ಬಸ್ ಗಳ ಮಾಸಿಕ ಶುಲ್ಕ ಪರಿಷ್ಕರಣೆ ಮಾಡಲಾಗಿದೆ.

ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳು, ಫಾಸ್ಟ್ಟ್ಯಾಗ್ ಮಾನ್ಯವಿಲ್ಲದ ಅಥವಾ ಕಾರ್ಯತಹಿತ ಫಾಸ್ಟ್ಟ್ಯಾಗ್ ಹೊಂದಿರುವ ವಾಹನಗಳು ಫಾಸ್ಟ್ಟ್ಯಾಗ್ ಪಥದಲ್ಲಿ ಚಲಿಸಲು ಎರಡರಷ್ಟು ಟೋಲ್ ಶುಲ್ಕ ಪಾವತಿಸಬೇಕಿದೆ.

ಅನುಮತಿಸಿದ ಲೋಡ್ ಗಿಂತ ಹೆಚ್ಚು ಲೋಡ್ ಮಾಡಲಾದ ವಾಹನಗಳು ಹೆಚ್ಚಿನ ಲೋಡ್ ಶೇಕಡವಾರು ಆಧಾರದ ಮೇಲೆ ಅನ್ವಯವಾಗುವ ಬಳಕೆದಾರ ಶುಲ್ಕದ 10 ಪಟ್ಟುವರೆಗೆ ಪಾವತಿಸಲು ಜವಾಬ್ದಾರರಾಗಿರುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read