ವಿವಾಹಿತ ಪುತ್ರಿಗೆ ಆಸ್ತಿ ಕೊಡಬಾರದೆಂಬ ಮನಃಸ್ಥಿತಿ ಹೋಗಬೇಕಿದೆ: ಹೈಕೋರ್ಟ್‌ ಮಹತ್ವದ ಅಭಿಮತ​

Daughter/sister's rights in family property do not change: Gujarat HC -  Social News XYZ

ಮಗಳ ಮದುವೆಯಾದ ಮಾತ್ರಕ್ಕೆ ತವರು ಕುಟುಂಬದಲ್ಲಿ ಆಕೆಯ ಸ್ಥಾನಮಾನವು ಬದಲಾಗುವುದಿಲ್ಲ. ಆದ್ದರಿಂದ ಕುಟುಂಬದಲ್ಲಿ ಮಗಳಿಗೆ ಮದುವೆಯಾದ ನಂತರ ಆಕೆಗೆ ಯಾವುದೇ ಆಸ್ತಿಯನ್ನು ನೀಡಬಾರದು ಎಂಬ ಜನರ ಮನಃಸ್ಥಿತಿಯನ್ನು ಬದಲಾಯಿಸುವ ಸಮಯ ಬಂದಿದೆ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.

“ಕುಟುಂಬದಲ್ಲಿ ಮಗಳು ಅಥವಾ ಸಹೋದರಿ ಮದುವೆಯಾದ ನಂತರ ನಾವು ಅವಳಿಗೆ ಏನನ್ನೂ ನೀಡಬಾರದು ಎಂಬ ಮನಃಸ್ಥಿತಿ ಬದಲಾಗಬೇಕು. ಅವಳು ನಿಮ್ಮೊಂದಿಗೆ ಹುಟ್ಟಿದ ನಿಮ್ಮ ಸಹೋದರಿ. ಅವಳು ಈಗ ಮದುವೆಯಾದ ಮಾತ್ರಕ್ಕೆ ಕುಟುಂಬದಲ್ಲಿ ಅವಳ ಸ್ಥಾನಮಾನ ಬದಲಾಗುವುದಿಲ್ಲ. ಈ ಮನಃಸ್ಥಿತಿ ಹೋಗಬೇಕು’’ ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರ ವಿಭಾಗೀಯ ಪೀಠ ಹೇಳಿದೆ.

ಆಸ್ತಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್​ ಈ ಮಾತನ್ನು ಹೇಳಿದೆ. ಸಹೋದರಿ ಮದುವೆಯಾಗಿರುವ ಕಾರಣಕ್ಕೆ ಅವಳಿಗೆ ಆಸ್ತಿ ಪಾಲು ಸಿಗುವುದಿಲ್ಲ ಎನ್ನುವುದು ಅರ್ಜಿದಾರರ ವಾದವಾಗಿತ್ತು. ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ಮೇಲಿನಂತೆ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read