ನಿದ್ರೆ ಹಾಳು ಮಾಡುವ ಗೊರಕೆ ಸಮಸ್ಯೆಯಿಂದ ಮುಕ್ತಿ ಬೇಕಾ….?

ರಾತ್ರಿ ನಿದ್ರೆ ಸುಖಕರವಾಗಿರಬೇಕು. ಪಕ್ಕದವರು ಗೊರಕೆ ಶುರು ಮಾಡಿದ್ರೆ ನಿದ್ರೆ ನರಕವಾಗುತ್ತದೆ. ಈ ಗೊರಕೆ ಒಂದು ಸಾಮಾನ್ಯ ಸಮಸ್ಯೆ ನಿಜ. ಆದ್ರೆ ಕೆಲವೊಮ್ಮೆ ಈ ಸಮಸ್ಯೆ ದೊಡ್ಡದಾಗಬಹುದು. ಇದು ಕೆಲ ದಾಂಪತ್ಯ ಬಿರುಕಿಗೆ ಕಾರಣವಾಗಿದೆ. ಈ ಗೊರಕೆಯಿಂದ ಮುಕ್ತಿ ಬೇಕು ಎನ್ನುವವರು ಸುಲಭ ಮನೆ ಮದ್ದು ಮಾಡಿ ಗೊರಕೆಗೆ ಗುಡ್ ಬೈ ಹೇಳಬಹುದು.

ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿಗೆ ಏಲಕ್ಕಿ ಅಥವಾ ಏಲಕ್ಕಿ ಪುಡಿಯನ್ನು ಹಾಕಿ ಕುಡಿಯುತ್ತಿದ್ದರೆ ಗೊರಕೆಯ ಸಮಸ್ಯೆ ಕಡಿಮೆಯಾಗುತ್ತದೆ.

ಮಲಗುವ ಮೊದಲು ಒಂದು ಕಪ್ ಉಗುರು ಬೆಚ್ಚಗಿನ ನೀರಿಗೆ 1 ಚಮಚ ಅರಿಶಿನ ಪುಡಿ ಮತ್ತು ಒಂದು ಟೀ ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿದರೆ ಗೊರಕೆ ಸಮಸ್ಯೆ ನಿವಾರಣೆಯಾಗುತ್ತದೆ.

ಅರಿಶಿನವನ್ನು ಅನೇಕ ರೋಗಗಳಿಗೆ ರಾಮಬಾಣವೆಂದು ಪರಿಗಣಿಸಲಾಗುತ್ತದೆ. ಮಲಗುವ ಸಮಯಕ್ಕೆ ಅರ್ಧ ಗಂಟೆ ಮೊದಲು ಅರಿಶಿನ ಹಾಲನ್ನು ಕುಡಿದು  ಮಲಗಿದರೆ ಗೊರಕೆ ಸಮಸ್ಯೆ ಬಹಳಷ್ಟು ಕಡಿಮೆಯಾಗುತ್ತದೆ. ಅರಿಶಿನ ಗೊರಕೆ ಸಮಸ್ಯೆಗೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ.

ಪ್ರತಿದಿನ ಕೆಲವು ಹನಿ ಪುದೀನ ಎಣ್ಣೆಯನ್ನು ನೀರಿಗೆ ಹಾಕಿ ಮಲಗುವ ಮುನ್ನ ಗಾರ್ಗ್ಲಿಂಗ್ ಮಾಡಿದರೆ ಉಸಿರಾಟ ಸಮಸ್ಯೆ ದೂರವಾಗಿ ಗೊರಕೆ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read