ಸಾವು ಗೆದ್ದು ಬಂದ ಮಹಿಳೆ ಮಂಪರಿನಲ್ಲಿ ಬರೆದಿದ್ದೇನು….? ಓದಬಲ್ಲಿರಾ…..!

महिला ने जीवित होते ही पेपर पर लिखी थी बात (तस्वीर- Tina Hines/Facebook)

ಸಮಾಜ ಎಷ್ಟೇ ಮುಂದುವರೆದಿರಲಿ, ತಂತ್ರಜ್ಞಾನ ಬಂದಿರಲಿ, ಹುಟ್ಟು- ಸಾವು ಈಗ್ಲೂ ನಿಗೂಢ. ಸಾವು ಯಾವಾಗ ಬರುತ್ತೆ ಎನ್ನಲು ಸಾಧ್ಯವೇ ಇಲ್ಲ. ಸಾವಿನ ನಂತ್ರ ಏನಾಗುತ್ತೆ ಎಂಬ ಪ್ರಶ್ನೆ ಕೂಡ ಉತ್ತರವಿಲ್ಲದೆ ಹಾಗೆ ಉಳಿದಿದೆ. ಕೆಲವರು ಸಾವನ್ನು ಗೆದ್ದು ಬಂದವರಿದ್ದಾರೆ. ಕೆಲ ಕ್ಷಣಗಳ ಕಾಲ ಅವರ ಹೃದಯ ಬಡಿತ ಸ್ಥಬ್ತವಾದದ್ದಿದೆ. ಅವರು ತಾವು ನೋಡಿದ ಜಗತ್ತಿನ ಬಗ್ಗೆ ಹೇಳ್ತಾರೆ. ಅದನ್ನೇ ನಾವು ಸತ್ಯವೆಂದು ನಂಬಬೇಕೆ ವಿನಃ ನಮಗೆ ಬೇರೆ ದಾರಿಯಿಲ್ಲ. ಈಗ ಮಹಿಳೆಯೊಬ್ಬಳು ಸಾವು ಗೆದ್ದು ಬಂದ ಸಂದರ್ಭದಲ್ಲಿ ಬರೆದ ಅಕ್ಷರ ವೈರಲ್ ಆಗಿದೆ.

ಘಟನೆ ಅರಿಜೋನಾದಲ್ಲಿ ನಡೆದಿದೆ. ಟಿನಾ ಹೆಸರಿನ ಮಹಿಳೆಯೊಬ್ಬಳಿಗೆ ಹೃದಯಾಘಾತವಾಗಿತ್ತು. ಹೃದಯ 27 ನಿಮಿಷಗಳವರೆಗೆ ಬಂದ್ ಆಗಿತ್ತು. ಇದನ್ನು ನೋಡಿದ ವೈದ್ಯರು, ಟೀನಾ ಸಾವನ್ನಪ್ಪಿದ್ದಾಳೆಂದು ಘೋಷಣೆ ಮಾಡಿದ್ರೂ ತಮ್ಮ ಪ್ರಯತ್ನ ಮುಂದುವರೆಸಿದ್ದರು. ಸತತ ಪ್ರಯತ್ನದ ನಂತ್ರ ಟೀನಾ ಮತ್ತೆ ಎಚ್ಚರಗೊಂಡಿದ್ದಳು. ಎಚ್ಚರವಾಗ್ತಿದ್ದ ಸಮಯದಲ್ಲಿ ಟೀನಾ ಪೆನ್ನು, ನೋಟ್ ಬುಕ್ ಕೇಳಿದ್ದಳು. ಅದ್ರಲ್ಲಿ ಆಕೆ ಏನೇನೋ ಗೀಚಿದ್ದಾಳೆ. ಅದು ಏನು ಎಂಬುದು ಅರ್ಥ ಮಾಡಿಕೊಳ್ಳೋದು ಕಷ್ಟವಾಗಿದೆ. ಕೆಲವರು ಇದನ್ನು ಪರೀಕ್ಷೆ ಮಾಡಿ ಇದು ಇಂಗ್ಲೀಷ್ ಪದ ರಿಯಲ್ ಅಂದ್ರೆ ವಾಸ್ತವ ಎಂದಿದ್ದಾರೆ.

ಒಂದು ಅಕ್ಷರದ ಮೇಲೆ ಇನ್ನೊಂದು ಅಕ್ಷರ ಬರೆದ ಕಾರಣ ಟೀನಾ ಏನು ಬರೆದಿದ್ದಾಳೆ ಎಂಬುದನ್ನು ಅರ್ಥೈಸೋದು ಕಷ್ಟ. ಟೀನಾ ನಾಲ್ಕು ಮಕ್ಕಳ ತಾಯಿ. ಆಕೆ ಚಿಕಿತ್ಸೆ ನಂತ್ರ ಮನೆಗೆ ವಾಪಸ್ ಆಗಿದ್ದು ಸಾಮಾನ್ಯ ಜೀವನ ನಡೆಸುತ್ತಿದ್ದಾಳೆ. ನಾನು ಆ ಸಮಯದಲ್ಲಿ ಯೇಸುವನ್ನು ಕಲ್ಪಿಸಿಕೊಂಡೆ. ನನ್ನ ಕಣ್ಮುಂದೆ ಯೇಸು ಕಾಣಿಸಿಕೊಂಡರು ಎಂದು ಟೀನಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುನ್ನ ಹೇಳಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read