ಸಮೀಕ್ಷೆಯೇ ಸತ್ಯವಲ್ಲ…! ಸುಳ್ಳಾದ ಅನೇಕ ನಿದರ್ಶನಗಳಿವೆ

ನವದೆಹಲಿ: ಲೋಕಸಭೆ ಚುನಾವಣೆ ಕೊನೆಯ ಹಂತದ ಮತದಾನ ಮುಗಿದ ಬೆನ್ನಲ್ಲೇ ಎಕ್ಸಿಟ್ ಫೋಲ್ ಪ್ರಕಟವಾಗಿವೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಎನ್.ಡಿ.ಎ. ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ.

ಆದರೆ ಸಮೀಕ್ಷೆಯೇ ಸತ್ಯವಲ್ಲ ಎನ್ನುವುದು ಕೂಡ ನಿಜ. ನಿಖರವಾದ ಫಲಿತಾಂಶವನ್ನು ತಿಳಿಯಲು ಜೂನ್ 4ರವರೆಗೆ ಕಾಯಬೇಕಿದೆ. ಸಮೀಕ್ಷೆಗಳು ಸುಳ್ಳಾದ ಅನೇಕ ನಿದರ್ಶನಗಳಿವೆ.

2004 ರಲ್ಲಿ ವಾಜಪೇಯಿ ನೇತೃತ್ವದ ಎನ್.ಡಿ.ಎ. ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು ಆದರೆ, ಯುಪಿಎ ಮೈತ್ರಿಕೂಟ ಹೆಚ್ಚು ಸ್ಥಾನ ಗಳಿಸಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಆ ಚುನಾವಣೆಯಲ್ಲಿ ಎನ್.ಡಿ.ಎ. 189 ಸ್ಥಾನ ಗಳಿಸಿತ್ತು. ಇಂಡಿಯಾ ಶೈನಿಂಗ್ ಪ್ರಚಾರದಿಂದ ಮತ್ತೊಮ್ಮೆ ಎನ್.ಡಿ.ಎ. ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ ಎಂದು ಸಮೀಕ್ಷೆಗಳು ಹೇಳಿದ್ದವು. ಆ ಚುನಾವಣೆಯಲ್ಲಿ ಸಮೀಕ್ಷೆ ಸುಳ್ಳಾಗಿತ್ತು. ಕಾಂಗ್ರೆಸ್ 206 ಸ್ಥಾನ ಗಳಿಸಿತ್ತು.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿಯೂ ಹಿಂದೆ ಇದೇ ರೀತಿಯಾಗಿತ್ತು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆರಲಿದೆ ಎಂದು ಯಾವ ಸಮೀಕ್ಷೆಗಳೂ ಹೇಳಿರಲಿಲ್ಲ. ಆದರೆ ಸಮೀಕ್ಷೆಗಳನ್ನು ಸುಳ್ಳಾಗಿಸಿ ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದಿದ್ದರು.

2014ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್.ಡಿ.ಎ.ಗೆ ಬಹುಮತ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ ಜೆಡಿಯು, ಆರ್.ಜೆ.ಡಿ. ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು.

2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ 214 ಸ್ಥಾನ ಗಳಿಸಿದ ಟಿಎಂಸಿ ಅಧಿಕಾರಕ್ಕೆ ಬಂದಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read