ಅಧಿಕಾರದ ನಿರೀಕ್ಷೆಯಲ್ಲಿದ್ದ ‘ಇಂಡಿಯಾ’ ಮೈತ್ರಿಕೂಟಕ್ಕೆ ಶಾಕ್: ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳಲ್ಲೂ NDAಗೆ ಹೆಚ್ಚು ಸ್ಥಾನ

ನವದೆಹಲಿ: ಲೋಕಸಭೆ ಚುನಾವಣೆ ಕೊನೆಯ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ ಸಮೀಕ್ಷೆಗಳು ಪ್ರಕಟವಾಗಿದ್ದು, ಈ ಬಾರಿ ಎನ್.ಡಿ.ಎ. ಅತಿ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ.

ಯಾವುದೇ ಚುನಾವಣೋತ್ತರ ಸಮೀಕ್ಷೆಗಳಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಬಹುಮತ ಇಲ್ಲ. ಚುನಾವಣೆ ನಡೆದ 543 ಕ್ಷೇತ್ರಗಳಲ್ಲಿ ಬಹುಮತಕ್ಕೆ 272 ಸ್ಥಾನ ಗಳಿಸಬೇಕಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿಯೂ ಬಿಜೆಪಿ ನೇತೃತ್ವದ ಎನ್.ಡಿ.ಎ. ಅಧಿಕಾರಕ್ಕೆ ಬರಲಿದೆ. ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಹೇಳಲಾಗಿದೆ ಕರ್ನಾಟಕದಲ್ಲಿ ಕೂಡ ಬಿಜೆಪಿ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

ರಿಪಬ್ಲಿಕ್ ಟಿವಿ, ಪಿ ಮಾರ್ಕ್ ಸಮೀಕ್ಷೆ ಪ್ರಕಾರ ಎನ್‌ಡಿಎ 359, ಇಂಡಿಯಾ ಮೈತ್ರಿಕೂಟ 154. ಇತರರು 30 ಸ್ಥಾನ ಗಳಿಸಲಿದ್ದಾರೆ

ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ ಎನ್.ಡಿ.ಎ. 353 ರಿಂದ 368, ಇಂಡಿಯಾ ಮೈತ್ರಿಕೂಟ 118 ರಿಂದ 133, ಇತರರು 43 ರಿಂದ 48 ಸ್ಥಾನ ಗಳಿಸುವ ನಿರೀಕ್ಷೆ ಇದೆ.

ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಎನ್.ಡಿ.ಎ. 362 ರಿಂದ 392, ಇಂಡಿಯಾ 141 ರಿಂದ 161, ಇತರರು 10 ರಿಂದ 20 ಸ್ಥಾನ ಗಳಿಸುವ ನಿರೀಕ್ಷೆ ಇದೆ.

ದೈನಿಕ್ ಭಾಸ್ಕರ್ ಸಮೀಕ್ಷೆಯ ಪ್ರಕಾರ ಎನ್.ಡಿ.ಎ. 281 ರಿಂದ 350, ಇಂಡಿಯಾ 145 ರಿಂದ 201 ಇತರರು 33 ರಿಂದ 49 ಕ್ಷೇತ್ರಗಳಲ್ಲಿ ಜಯಗಳಿಸುವ ನಿರೀಕ್ಷೆ ಇದೆ.

ಇಂಡಿಯಾ ನ್ಯೂಸ್ -ಡೈನಾಮಿಕ್ಸ್ ಪ್ರಕಾರ ಎನ್.ಡಿ.ಎ. 371, ಇಂಡಿಯಾ ಮೈತ್ರಿಕೂಟ 125, ಇತರರು 47 ಸ್ಥಾನ ಗಳಿಸುವ ನಿರೀಕ್ಷೆ ಇದೆ.

ಇಂಡಿಯಾ ಟುಡೇ- ಮೈ ಆಕ್ಸಿಸ್ ಪ್ರಕಾರ ಎನ್.ಡಿ.ಎ. 361 ರಿಂದ 401, ಇಂಡಿಯಾ ಮೈತ್ರಿಕೂಟ 131 ರಿಂದ 166, ಇತರರು 8 ರಿಂದ 20 ಸ್ಥಾನ ಗಳಿಸಬಹುದು.

ಇಂಡಿಯಾ ಟಿವಿ -ಸಿಎನ್ಎಕ್ಸ್ ಪ್ರಕಾರ ಎನ್.ಡಿ.ಎ. 371 ರಿಂದ 401, ಇಂಡಿಯಾ ಮೈತ್ರಿಕೂಟ 109 ರಿಂದ 139, ಇತರರು 28ರಿಂದ 38 ಸ್ಥಾನ ಗಳಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read