ಈ ಶೈಕ್ಷಣಿಕ ವರ್ಷದಿಂದಲೇ 3, 6ನೇ ತರಗತಿಗೆ ಆಕರ್ಷಕ ಹೊಸ ಪಠ್ಯ ಪುಸ್ತಕ

ನವದೆಹಲಿ: 2024-2025ರ ಶೈಕ್ಷಣಿಕ ವರ್ಷದಿಂದ ಮೂರು ಮತ್ತು ಆರನೇ ತರಗತಿಗಳಲ್ಲಿ ಹೊಸ ಮತ್ತು ಆಕರ್ಷಕ ಪಠ್ಯಪುಸ್ತಕಗಳನ್ನು ಪರಿಚಯಿಸಲಾಗುವುದು.

ಪಠ್ಯಪುಸ್ತಕ ಅಭಿವೃದ್ಧಿ ಕಾರ್ಯ ಅಂತಿಮ ಹಂತದಲ್ಲಿದ್ದು, 3 ಮತ್ತು 6ನೇ ತರಗತಿಯ ಒಂಬತ್ತು ಪಠ್ಯಪುಸ್ತಕಗಳು ಈಗಾಗಲೇ ಲಭ್ಯವಿವೆ. ಉಳಿದ ಎಂಟು ಅತಿ ಶೀಘ್ರದಲ್ಲಿ ಲಭ್ಯವಾಗಲಿದೆ ಎಂದು ಶಿಕ್ಷಣ ಸಚಿವಾಲಯ ಮಾಹಿತಿ ನೀಡಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್‌ಸಿಇಆರ್‌ಟಿ) ಪಠ್ಯಪುಸ್ತಕ ರಚನಾ ಪ್ರಕ್ರಿಯೆ ಪ್ರಗತಿ ಪರಿಶೀಲಿಸಿದ್ದಾರೆ.

NCERT ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಎನ್‌ಸಿಇಆರ್‌ಟಿ ನಿರ್ದೇಶಕರು ಮತ್ತು ಕೇಂದ್ರೀಯ ಮಂಡಳಿಯ ಅಧ್ಯಕ್ಷರೊಂದಿಗೆ ಸಚಿವರು ಸಭೆ ನಡೆಸಿ ವಿವರವಾಗಿ ಚರ್ಚಿಸಿದ್ದಾರೆ.

2020 ರ ರಾಷ್ಟ್ರೀಯ ಶಿಕ್ಷಣ ನೀತಿಯು ಉತ್ತಮ ಗುಣಮಟ್ಟದ ಪಠ್ಯಪುಸ್ತಕಗಳನ್ನು ಒದಗಿಸುವ ಗುರಿ ಹೊಂದಿದೆ. ಉತ್ತಮ ಕಲಿಕೆಯ ಫಲಿತಾಂಶಗಳಿಗಾಗಿ ಕಲಿಕೆಯನ್ನು ಸಂತೋಷದಾಯಕ ಮತ್ತು ಒತ್ತಡ-ಮುಕ್ತವಾಗಿಸುವ ಉದ್ದೇಶವನ್ನೂ ಕೂಡ ಹೊಂದಿದೆ. NCERT ಹೊಸ ಪಠ್ಯಪುಸ್ತಕಗಳನ್ನು ಒಂದರಿಂದ ಹನ್ನೆರಡನೆಯ ತರಗತಿಗಳಿಗೆ ಸಿದ್ಧಪಡಿಸಲಾಗುತ್ತಿದೆ.

https://twitter.com/EduMinOfIndia/status/1808796952634523906

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read