BIG NEWS: ಖ್ಯಾತ ನಟಿ ನವ್ಯಾ ನಾಯರ್ ವಿರುದ್ಧ FIR ದಾಖಲು

ಕೊಚ್ಚಿ: ಖ್ಯಾತ ನಟಿ ನವ್ಯಾ ನಾಯರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ. ಕನ್ನಡದ ಗಜ, ದೃಶ್ಯ, ನಮ್ಮ ಯಜಮಾನ್ರು ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ನವ್ಯಾ ನಾಯರ್ ವಿರುದ್ಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧಿಸಲ್ಪಟ್ಟ ಐಆರ್ ಎಸ್ ಅಧಿಕಾರಿ ಸಚಿನ್ ಸಾವಂತ್ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ನವ್ಯಾ ನಾಯರ್, ಆ ಅಧಿಕಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಉಡುಗೊರೆ, ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಡಿ ತನಿಖೆ ನಡೆಸಿದ್ದು, ನವ್ಯಾ ನಾಯರ್ ಅಧಿಖಾರಿಯಿಂದ ಹಣ, ಚಿನ್ನಾಭರಣ ಪಡೆದಿರುವುದು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನವ್ಯಾ ನಾಯರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಅಧಿಕಾರಿ ಸಚಿನ್ ವಿಚಾರಣೆ ವೇಳೆ ಅವರ ವಾಟ್ಸಪ್ ನಿಂದಾಗಿ ನಟಿ ನವ್ಯಾ ನಾಯರ್ ಜೊತೆ ಆತ್ಮೀಯರಾಗಿದ್ದ ವಿಷಯ ಬೆಳಕಿಗೆ ಬಂದಿದೆ. ಕೊಚ್ಚಿಯಲ್ಲಿ ನವ್ಯಾ ನಾಯರ್ ಹಾಗೂ ಸಚಿನ್ ಸಾವಂತ್ ಒಂದೇ ಅಪಾರ್ಟ್ ಮೆಂಟ್ ನ ನಿವಾಸಿಗಳಾಗಿದ್ದು ನೆರೆಹೊರೆಯವರಾಗಿದ್ದಾರೆ. ಅಲ್ಲದೇ ಹಲವು ಬಾರಿ ಗುರುವಾಯೂರು ದೇವಾಲಯಕ್ಕೂ ನವ್ಯಾ, ಸಚಿನ್ ರನ್ನು ಕರೆದೊಯ್ದಿದ್ದರು. ಸಚಿನ್ ರಿಂದ ಹಲವು ಉಡುಗೊರೆಯನ್ನು ಪಡೆದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ನವ್ಯಾ ನಾಯರ್, ಇಬ್ಬರೂ ನೆರೆಹೊರೆಯವರಾಗಿದ್ದರಿಂದ ಗೆಳೆತನವಿತ್ತು. ಅದೇ ಕಾರಣಕ್ಕೆ ಹಲವು ಬಾರಿ ದೇವಾಲಯಕ್ಕೆ ಕರೆದೊಯ್ದಿದ್ದೆ. ನನ್ನ ಮಗನ ಹುಟ್ಟುಹಬ್ಬಕ್ಕೆ ಅವರು ಆಭರಣ ಉಡುಗೊರೆ ನೀಡಿದ್ದರು. ಗೆಳೆತನ ಮೀರಿದ ಸಂಬಂಧ ನಮ್ಮದಲ್ಲ, ಅವರ ಹಣಕಾಸಿನ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read