ಹಾಸನ ಎಂ. ಶ್ರೀ ಜವಾಹರ ನವೋದಯ ವಿದ್ಯಾಲಯ, ಮಾವಿನಕೆರೆ, ಹಾಸನಕ್ಕೆ 2026 ನೇ ಸಾಲಿನ ಗಿI ನೇ ತರಗತಿ ಪ್ರವೇಶಕ್ಕಾಗಿ ಜವಾಹರ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆಗೆ ನೊಂದಾಯಿಸಿಕೊAಡಿರುವ ಎಲ್ಲಾ ಅಭ್ಯರ್ಥಿಗಳಿಗೆ ತಿಳಿಸಬೇಕಾಗಿರುವುದೇನೆಂದರೆ, ಆನ್ ಲೈನ್ ತಿದ್ದುಪಡಿ ಕಿಟಕಿ 30-08-2025 ರವರೆಗೆ ತೆರೆದಿರುತ್ತದೆ ಎಂದು ಎಂ. ಶ್ರೀ ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.
ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಕೆಳಗಿನ ಮಾಹಿತಿಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು : ಲಿಂಗ – ಗಂಡು/ಹೆಣ್ಣು, ವರ್ಗ – ಸಾಮಾನ್ಯ / ಇತರ ಹಿಂದುಳಿದ ವರ್ಗ / ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಪ್ರದೇಶ – ಗ್ರಾಮೀಣ / ನಗರ, ವಿಕಲಚೇತನತೆ (ಯಾವುದೇ ಅಸಮರ್ಥತೆ ಸಂಬಂಧಿತ ಮಾಹಿತಿ), ಪರೀಕ್ಷಾ ಮಾಧ್ಯಮ – ಅಭ್ಯರ್ಥಿ ಬಯಸಿದ ಭಾಷೆ
ಮುಖ್ಯ ಸೂಚನೆ: ತಿದ್ದುಪಡಿ ಕಿಟಕಿ ಮುಚ್ಚಿದ ನಂತರ ಯಾವುದೇ ರೀತಿಯ ಪರಿಷ್ಕರಣೆಗಳಿಗೆ ಅವಕಾಶವಿರುವುದಿಲ್ಲ, ಅಭ್ಯರ್ಥಿಗಳು ತಮ್ಮ ನೊಂದಣಿ ಸಂಖ್ಯೆಯ ಮೂಲಕ ಅಧಿಕೃತ ವೆಬ್ಸೈಟ್ನಲ್ಲಿ ಲಾಗಿನ್ ಆಗಿ ತಿದ್ದುಪಡಿ ಪ್ರಕ್ರಿಯೆ ನಡೆಸಬೇಕು, ನೀಡುವ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ, ದೃಢಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಬೇಕು.
ತಪ್ಪು ವಿವರಗಳು ಉಳಿದಿದ್ದರೆ, ಪ್ರವೇಶ ಪರೀಕ್ಷೆ, ಫಲಿತಾಂಶ, ಮತ್ತು ಪ್ರವೇಶ ಪ್ರಕ್ರಿಯೆಯ ಸಮಯದಲ್ಲಿ ಸಮಸ್ಯೆಗಳು ಉಂಟಾಗಬಹುದು. ಇದರ ಪೂರ್ಣ ಹೊಣೆಗಾರಿಕೆ ಅಭ್ಯರ್ಥಿಯ ಪೋಷಕರದ್ದೇ ಆಗಿರುತ್ತದೆ. ವರ್ಗ / ವಿಕಲಚೇತನತೆ ತಿದ್ದುಪಡಿಗೆ ಸಂಬಂಧಿಸಿದಂತೆ ನಂತರದಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಯುತ್ತದೆ. ತಪ್ಪು ಮಾಹಿತಿ ನೀಡಿದರೆ ಅರ್ಜಿ ರದ್ದುಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.