ನವದೆಹಲಿ: ನರೇಂದ್ರ ಮೋದಿ ಮೂರನೇ ಬಾರಿಗೆ ಇಂದು ದೇಶದ ಪ್ರಧಾನಿಯಾಗಿ ಪ್ರಮಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ದೆಹಲಿ ಹಾಗೂ ರಷ್ಟ್ರಪತಿ ಭವನಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದೆಹಲಿಯಾದ್ಯಂತ 3 ಹಂತದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ರಷ್ಟ್ರಪತಿ ಭವನಕ್ಕೆ 5 ಹಂತದ ಭದ್ರತೆ ನಿಯೋಜಿಸಲಾಗಿದೆ.
SWAT ಹಾಗೂ ಎನ್ ಎಸ್ ಜಿ ಕಮಂಡೋಗಳು ಹದ್ದಿನ ಕಣ್ಣೀರಿಸಿದ್ದಾರೆ. ಪ್ಯಾರಾ ಮಿಲಿಟರಿ, ಎನ್ ಎಸ್ ಜಿ ಮಕಾಂಡೋಗಳು, ಡ್ರೋಣ್ ಹಾಗೂ ಸ್ನೈಪರ್ ಗಳ ಮೂಲಕ ಬಿಗಿ ಭದ್ರತೆ ಕಲ್ಪಿಸಲಾಗಿದೆ. ದೆಹಲಿಯಲ್ಲಿ 2500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಐದಕ್ಕೂ ಹೆಚ್ಚು ರಾಷ್ಟ್ರಗಳ ಗಣ್ಯರು ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.