ಬೆಂಗಳೂರು : ರಾಜ್ಯದಲ್ಲಿ ನಂದಿನಿ ಮೊಸರಿನ ಬೆಲೆ ಲೀ.ಗೆ 4 ರೂ ಇಳಿಕೆಯಾಗಲಿದ್ದು, ಸೆ.22 ರಿಂದ ಪರಿಷ್ಕೃತ ದರ ಜಾರಿಯಾಗಲಿದೆ ಎನ್ನಲಾಗಿದೆ.
ಹೌದು, ಕೇಂದ್ರ ಸರ್ಕಾರ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್ ಟಿ ದರ ಇಳಿಕೆ ಮಾಡಿದ್ದು, ಈ ಹಿನ್ನೆಲೆ ನಂದಿನಿ ಮೊಸರು, ಬೆಣ್ಣೆ, ಚೀಸ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಕಡಿಮೆಯಾಗಲಿದೆ. ಸೆ.22 ಸೋಮವಾರದಿಂದ ಪರಿಷ್ಕೃತ ದರಗಳು ಜಾರಿಯಾಗಲಿದೆ. ಇಂದು ಶನಿವಾರ ಕೆಎಂಎಫ್ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಯಿದೆ. ಜಿಎಸ್ ಟಿ ಇಳಿಕೆಯಿಂದ ಮೊಸರಿನ ದರ ಲೀ.4 ರೂ ಇಳಿಕೆಯಾಗಲಿದೆ. ಆದರೆ ಹಾಲಿನ ದರ ಯಥಾಸ್ಥಿತಿ ಇರಲಿದೆ.