ನಾಳೆಯಿಂದ ಅರ್ಧ ಲೀ. ಹಾಲಿಗೆ 2 ರೂ. ಹೆಚ್ಚಳ; 10 ಮಿ.ಲೀ. ಹೆಚ್ಚುವರಿ ಹಾಲು: ಯಾವುದಕ್ಕೆ ಎಷ್ಟು? ಇಲ್ಲಿದೆ ವಿವರ

ಆ.1 ರಿಂದ ಅನ್ವಯವಾಗುವಂತೆ ಕೆಎಂಎಫ್ ನಂದಿನಿ ಹಾಲು ಮತ್ತು ಮೊಸರಿನ ಮಾರಾಟದ ದರ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಖರೀದಿಸುವ ಹಾಲಿನ ದರವನ್ನು ಕೂಡ ಪರಿಷ್ಕರಿಸಲಾಗಿದೆ.

ಪ್ರತಿ ಲೀಟರ್‌ಗೆ 3 ರೂ.ನಂತೆ ಮಾರಾಟ ದರ ಹೆಚ್ಚಿಸಿದ್ದು, 500 ಮಿ.ಲೀ. 1 ಪ್ಯಾಕೆಟ್‌ಗೆ 1.50 ರೂ. ಹೆಚ್ಚಿಸಬೇಕಿತ್ತು. ಚಿಲ್ಲರೆ ಅಭಾವದ ಕಾರಣ ಗ್ರಾಹಕರು ಮಾರಾಟದಾರರಿಂದ ದೂರುಗಳು ಬರುವ ಸಂಭವದ ಹಿನ್ನೆಲೆಯಲ್ಲಿ 500 ಮಿಲೀ. ಪ್ರತಿ ಪ್ಯಾಕೆಟ್‌ಗೆ 10 ಮಿ.ಲೀ. ಹೆಚ್ಚಾಗಿ ನೀಡಿ ಹೆಚ್ಚುವರಿ ನೀಡುತ್ತಿರುವ ಹಾಲಿನ ಪ್ಯಾಕೆಟ್ ಮೇಲೆ ಹೆಚ್ಚುವರಿ 10 ಎಂಎಲ್ ಎಂದು ಮುದ್ರಿಸಿ ಪ್ರತಿ 500 ಮಿಲೀ.ಪ್ಯಾಕೆಟ್‌ಗೆ 2 ರೂ.ನಂತೆ ಹೆಚ್ಚಿಸಲಾಗಿದೆ.

ದರ ಪರಿಷ್ಕರಣೆಯ ನಂತರ ಹಾಲಿನ ದರ

ಟೋನ್ಡ್ ಮಿಲ್ಕ್ 1 ಲೀಟರ್‌ಗೆ 39-42 ರೂ., ಅರ್ಧ ಲೀಟರ್‌ಗೆ 20-22 ರೂ.,

ಶುಭಂ ಸ್ಟ್ಯಾಂಡರ್ಡ್ ಲೀಟರ್ ಗೆ 45-48 ರೂ., ಅರ್ಧ ಲೀಟರ್‌ಗೆ 23-25 ರೂ.

ಹೋಮೋಜೀನೈಜ್ಡ್ 1 ಲೀ. 46-49, ರೂ. ಅರ್ಧ ಲೀಟರ್ 23-25 ರೂ.,  200 ಮಿಲೀ. 11-12 ರೂ.,

ಮೊಸರು ಅರ್ಧ ಲೀ. 24-26 ರೂ., 200 ಮಿಲೀ 11-12 ರೂ.,

ಮಜ್ಜಿಗೆ 200ಮಿಲೀ. 8-9 ರೂ.

ಸ್ವೀಟ್ ಲಸ್ಸೀ 200ಮಿಲೀ 12- 13ರೂ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read