ಬೆಂಗಳೂರು: ಜಿಎಸ್ ಟಿ ಕಡಿತದ ಬಳಿಕ ಗುಡ್ ನ್ಯೂಸ್ ನೀಡಿದ್ದ ಕೆ.ಎಂ.ಎಫ್, ತುಪ್ಪಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ನಂದಿನಿ ತುಪ್ಪದ ದರವನ್ನು ದಿಢೀರ್ ಏರಿಕೆ ಮಾಡಿದೆ. ಈ ಮೂಲಕ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.
ಒಂದು ಲೀಟರ್ ನಂದಿನಿ ತುಪ್ಪದ ದರವನ್ನು ಬರೋಬ್ಬರಿ 90 ರೂಪಾಯಿ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಒಂದು ಲೀಟರ್ ನಂದಿನಿ ತುಪ್ಪದ 700 ರೂಪಾಯಿ ಆಗಿದೆ. ಇದು ಜನಸಾಮನ್ಯರಿಗೆ ಭಾರಿ ಹೊರೆಯಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಹಾಲಿನಿ ದರವನ್ನು ಹೆಚ್ಚಳ ಅಮಡುವ ಸಾಧ್ಯತೆ ಬಗ್ಗೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಸುಳಿವು ನೀಡಿದ್ದಾರೆ. ನಂದಿನಿ ತುಪ್ಪದ ಜೊತೆ ಶೀಘ್ರದಲ್ಲಿಯೇ ಹಾಲಿನ ದರ ಕೂಡ ಮತ್ತೆ ಏರಿಕೆ ಆಗುವ ಸಾಧ್ಯತೆ ದಟ್ಟವಾಗಿದೆ.
