ಪ್ರಯಾಣಿಕರಿಗೆ ಮಹತ್ವದ ಮಾಹಿತಿ: ಇನ್ಮುಂದೆ ರ್ಯಾಪಿಡೋ, ನಮ್ಮ ಯಾತ್ರಿ, ರೆಡ್ ಬಸ್ ಆ್ಯಪ್‌ಗಳಲ್ಲಿಯೂ ಮೆಟ್ರೋ ಟಿಕೆಟ್ ಲಭ್ಯ

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಡಿಜಿಟಲ್ ವಾಣಿಜ್ಯದ ಓಪನ್ ನೆಟ್ ವರ್ಕ್ ಪ್ಲಾಟ್ ಫಾರ್ಮ್ ಆಧಾರಿತ ಮೆಟ್ರೋ ಕ್ಯೂ ಆರ್ ಟಿಕೆಟ್ ಸಂಚಾರಿ ಮೊಬೈಲ್ ಆ್ಯಪ್‌ ಗಳಲ್ಲಿಯೂ ಸಿಗಲಿದೆ.

ಈ ಮೂಲಕ ಇನ್ಮುಂದೆ ರ್ಯಾಪಿಡೋ, ನಮ್ಮ ಯಾತ್ರಿ, ರೆಡ್ ಬಸ್, ಟಮ್ಮಾಕ್ ಸೇರಿದಂತೆ ವಿವಿಧ ಸಂಚಾರಿ ಆ್ಯಪ್‌ ಗಳಲ್ಲಿಯೂ ನೇರವಾಗಿ ಮೆಟ್ರೋ ಕ್ಯೂ ಆರ್ ಟಿಕೆಟ್ ಪಡೆಯಬಹುದಾಗಿದೆ.

ಈ ನೂತನ ವ್ಯವಸ್ಥೆಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ. ಇದರಿಂದ ಪ್ರಯಾಣಿಕರಿಗೆ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣ ಯೋಜನೆ ರೂಪಿಸುವ ಸೌಲಭ್ಯ ಲಭ್ಯವಾಗುತ್ತದೆ ಎಂದು ಬಿಎಂಆರ್ ಸಿ ಎಲ್ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read