ನನಸಾಯ್ತು ಪ್ರಯಾಣಿಕರ ಹಲವು ವರ್ಷಗಳ ಕನಸು: ಮೆಟ್ರೋ ನಿಲ್ದಾಣದಲ್ಲಿ NCMC ಕಾರ್ಡ್ ಲಭ್ಯ

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರ ಹಲವು ವರ್ಷಗಳ ಕನಸು ನನಸಾಗಿದೆ. ಸೋಮವಾರದಿಂದ ನಮ್ಮ ಮೆಟ್ರೋದಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಪರಿಚಯಿಸಲಾಗುತ್ತಿದೆ. ಸೋಮವಾರದಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಎನ್‌ಸಿಎಂಸಿ ಕಾರ್ಡ್ ಲಭ್ಯವಿರುತ್ತದೆ. ಎಲ್ಲಾ ಸಾರಿಗೆ ವ್ಯವಸ್ಥೆ, ಪೆಟ್ರೋಲ್ ಬಂಕ್ ಮತ್ತು ಮಾಲ್ ಗಳಲ್ಲಿ ಬಳಸಬಹುದಾಗಿದೆ.

ಬೆಂಗಳೂರಿನ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಆಗಸ್ಟ್ 21ರಿಂದ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಶಾಪಿಂಗ್ ಮತ್ತು ಪ್ರಯಾಣಕ್ಕೆ ಪ್ರತ್ಯೇಕ ಕಾರ್ಡ್ ಬಳಕೆಯನ್ನು ಇದು ಕಡಿಮೆ ಮಾಡಲಿದೆ. ಎನ್.ಸಿ.ಎಂ.ಸಿ. ಕಾರ್ಡ್ ಗಳಿಗೆ 50 ರೂಪಾಯಿ ದರವಿದ್ದು, ಸ್ಮಾರ್ಟ್ ಕಾರ್ಡ್ ರೀತಿಯಲ್ಲಿ ಪ್ರಯಾಣದ ಶೇಕಡ 5 ರಷ್ಟು ರಿಯಾಯಿತಿ ಸಿಗಲಿದೆ.

ಪ್ರಯಾಣಿಕರು ಕಾರ್ಡ್ ಪಡೆಯಲು nammametro.agsindia.com ವೆಬ್ಸೈಟ್ ಅಥವಾ BMRCL RBL Bank NCMC ಮೊಬೈಲ್ ಆಪ್ ನಲ್ಲಿ ಸ್ವಯಂ ನೋಂದಣಿ ಮಾಡಿಕೊಂಡು ನೋಂದಣಿ ಸಂಖ್ಯೆಯನ್ನು ಮೆಟ್ರೋ ಟಿಕೆಟ್ ಕೌಂಟರ್ ನಲ್ಲಿ ತಿಳಿಸಬೇಕಿದೆ.

ಎನ್.ಸಿ.ಎಂ.ಸಿ. ಕಾರ್ಡ್ ಆರ್.ಬಿ.ಎಲ್. ಬ್ಯಾಂಕ್ ನ ಎಲ್ಲಾ ಶಾಖೆಗಳಲ್ಲೂ ಸಿಗಲಿದೆ. ಈ ಕಾರ್ಡ್ ದೇಶದ ಎಲ್ಲಾ ಸಾರಿಗೆ ವ್ಯವಸ್ಥೆಯಲ್ಲಿ, ಪೆಟ್ರೋಲ್ ಬಂಕ್, ಶಾಪಿಂಗ್ ಮಾಲ್, ದಿನಸಿ ಮಳಿಗೆಗಳಲ್ಲಿಯೂ ಬಳಕೆ ಮಾಡಬಹುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read